- Saturday
- March 7th, 2026
ಸುಬ್ರಹ್ಮಣ್ಯ ಡಿಸೆಂಬರ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಪರಿಶಿಷ್ಟ ಕಲ್ಯಾಣ ಇಲಾಖೆ ಮಂಗಳೂರು ಇದರ ವ್ಯಾಪ್ತಿಗೆ ಒಳಪಡುವ ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾದ ಕಾರ್ಯಕ್ರಮಗಳನ್ನ ನೀಡುವುದರೊಂದಿಗೆ ಜನರ ಮೆಚ್ಚುಗೆ ಗಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ರಥ ಬೀದಿ ಪಕ್ಕದ ಸಭಾಂಗಣದಲ್ಲಿ...
ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಗೌಡ.ಎನ್ ರವರು ಜ.03 ರಿಂದ 05 ರವರೆಗೆ ಚೆನ್ನೈ ನ ಶ್ರೀ ಸಾಯಿರಾಮ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವೃಕ್ಷಮಣಿಧಾರರ ಸಮಾವೇಶಕ್ಕೆ ತೆರಳಲಿದ್ದಾರೆ.
ಸುಬ್ರಹ್ಮಣ್ಯ : ದೇವರಗದ್ದೆ-ಮಾನಾಡು-ಅಜ್ಜಿಗುಡ್ಡೆ-ನೂಜಿಬಿಟ್ಟು ಸಂಪರ್ಕಿಸುವ ಕಿರುಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ-ಮಾನಾಡು-ಅಜ್ಜಿಗುಡ್ಡೆ-ನೂಜಿಬೆಟ್ಟು ಮೂಲಕ ಐನೆಕಿದು ಹಾಗೂ ಬಾಳುಗೋಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಮಾನಾಡು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಸುಮಾರು 20ಲಕ್ಷ ವೆಚ್ಚ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಿರು ಸೇತುವೆಯ ಗುದ್ದಲಿ ಪೂಜೆಯನ್ನು ಡಿ.25ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್...
ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್(ರಿ.) ಐವರ್ನಾಡು ಇದರ ಆಶ್ರಯದಲ್ಲಿ ಡಿ.28ರಂದು ಐವರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ “ಐವರ್ನಾಡು ಗ್ರಾಮ ಕ್ರಿಕೆಟ್ ಹಬ್ಬ - IPL Season 10” ನಡೆಯಲಿದ್ದು, ಬೆಳ್ಳಾರೆ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ.ಡಿ.ಎನ್ ರವರು ಉದ್ಘಾಟಿಸಲಿದ್ದು, ಸುಳ್ಯ ಕೆ.ವಿ.ಜಿ ಐ.ಟಿ.ಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಐವರ್ನಾಡು ಪ್ರಾಥಮಿಕ ಕೃಷಿ...
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ನೇತೃತ್ವದಲ್ಲಿ ನಾಳೆ(ಡಿ.27) ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕೆರೆಯಲ್ಲಿ 9ನೇ ವರ್ಷದ “ಮಂಗಳೂರು ಕಂಬಳ”ವು ನವ ವರ್ಷ-ನವ ವಿಧ ಪರಿಕಲ್ಪನೆಯೊಂದಿಗೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದ್ದು, ಡಿ.27ರಂದು ಬೆಳಿಗ್ಗೆ ಕಂಬಳದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ ಸಭಾ ಕಾರ್ಯಕ್ರಮ ನಡೆದು ಡಿ.28ರಂದು ಬೆಳಿಗ್ಗೆ...
ಆರ್.ಪಿ ಕಲಾ ಸೇವಾ ಟ್ರಸ್ಟ್(ರಿ.) ಇದರ ಸಂಚಾಲಕರು ಹಾಗೂ ಸಂಘಟಕರು,ಖ್ಯಾತ ಗಾಯಕರು, ಯುವ ಸಾಹಿತಿ, ಕವಿ ಹಾಗೂ ಜಾನಪದ ನೃತ್ಯಗಾರರಾದ ಕಲಾರತ್ನ ರವಿ ಪಾಂಬಾರು ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಆದಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ. ಇವರ ಕಲೆ ಹಾಗೂ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ...
ಬೆಳ್ಳಾರೆ ಜೇಸಿಐ ವತಿಯಿಂದ 2025ನೇ ಸಾಲಿನ ಶಾಶ್ವತ ಯೋಜನೆಗಳ ಕೊಡುಗೆಯಾಗಿ ಸೋಮಶೇಖರ್ ಮಾಸ್ಟರ್ ಪ್ಲಾನ್ ಪ್ರಾಯೋಜಕತ್ವದಲ್ಲಿ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೂಚನಾ ಫಲಕವನ್ನು ಹಸ್ತಾಂತರಿಸಲಾಯಿತು. ಜೇಸಿಐ ವಲಯ 15ರ ಪೂರ್ವ ವಲಯಾಧಿಕಾರಿ ಪ್ರೀತಮ್ ರೈ ಪೆರುವಾಜೆ ಸೂಚನಾ ಫಲಕದ ಕೊಡುಗೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಅವರಿಗೆ...
ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ದೇವ ಗುರುಪುರ ಬಸ್ಸು ನಿಲ್ದಾಣದ ಅಂಗಡಿಗೆ ಸ್ವಚ್ಛತಾ ಪಲಕ ಅಳವಡಿಕೆ ಹಾಗೂ ಕಸದ ಬುಟ್ಟಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾಧ್ಯಕ್ಷ ಯೋಗೀಶ್ ದೇವ, ಗ್ರಾಮ ಪಂಚಾಯತ್ ನ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ದಿನಾಂಕ ಡಿ.23ರಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.ಕುಕ್ಕುಜಡ್ಕ ವಠಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿದ್ದ ಕಸ-ಕಡ್ಡಿಗಳನ್ನು ಹೆಕ್ಕುವ ಮೂಲಕ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ...
