Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 30,000ಕ್ಕೂ ಅಧಿಕ ಭಕ್ತಾದಿಗಳಿಂದ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ ಡಿಸೆಂಬರ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ  ಮಹೋತ್ಸವದ ಶುಕ್ರವಾರದ ದಿನದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ಅಂದಾಜು ಸುಮಾರು 30 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದ್ದಾರೆ. ದೂರದ ಊರುಗಳಾದ ಬೆಂಗಳೂರು, ಮೈಸೂರು, ಕೋಲಾರ, ದೊಡ್ಡಬಳ್ಳಾಪುರ, ಕಾರವಾರ, ಹುಬ್ಬಳ್ಳಿ, ದಾವಣಗೆರೆ, ಧಾರವಾಡ, ಶಿವಮೊಗ್ಗ, ವಿಜಯಪುರ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ತುಮಕೂರು ಮುಂತಾದಡೆಗಳಿಂದ ಬಹಳಷ್ಟು ಭಕ್ತರು ಸರಕಾರಿ ಹಾಗೂ ಖಾಸಗಿ ಬಸ್ಸಿನಲ್ಲಿ ಶ್ರೀ ಕ್ಷೇತ್ರಕ್ಕೆ ನಿನ್ನೆ ರಾತ್ರಿಯಿಂದಲೇ ಆಗಮಿಸುತ್ತಿದ್ದು, ಕಿರುಷಷ್ಠಿ ಮಹೋತ್ಸವದ ಈ ದಿನದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ರಥ ಬೀದಿಯಲ್ಲಿ ರಥೋತ್ಸವ ನಡೆಯುವುದರಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದರು. ಅಲ್ಲದೆ ಡಿಸೆಂಬರ್ ಅಂತ್ಯದ ರಜಾ ದಿನಗಳಲ್ಲಿ ಸರ್ಕಾರಿ ನೌಕರರ ಕುಟುಂಬದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು. ಕುಕ್ಕೆಯಲ್ಲಿರುವ ಎಲ್ಲಾ ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ಭರ್ತಿಯಾಗಿದ್ದು, ಈ ವರ್ಷ ವಿಶೇಷವಾಗಿ ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜನ ಪ್ರಸಾದಕ್ಕಾಗಿ ಶ್ರೀ ದೇವಳದ ಪಕ್ಕದಲ್ಲಿ ಹೊಸದಾಗಿ ಭೋಜನ ಶಾಲೆಯನ್ನು ತಾತ್ಕಾಲಿಕವಾಗಿ ಏರ್ಪಾಡು ಮಾಡಿ ಅಲ್ಲಿ ಭೋಜನ ಪ್ರಸಾದ ನೀಡಲಾಯಿತು. ಭಕ್ತಾದಿಗಳ ದೇವರ ದರ್ಶನದ ಸರದಿ ವ್ಯವಸ್ಥೆಯನ್ನು ದೇವಳದ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಭದ್ರತಾ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading