Ad Widget

ಸುಬ್ರಹ್ಮಣ್ಯ : ದೇವರಗದ್ದೆ-ಮಾನಾಡು-ಅಜ್ಜಿಗುಡ್ಡೆ-ನೂಜಿಬಿಟ್ಟು ಸಂಪರ್ಕಿಸುವ ಕಿರುಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ-ಮಾನಾಡು-ಅಜ್ಜಿಗುಡ್ಡೆ-ನೂಜಿಬೆಟ್ಟು ಮೂಲಕ ಐನೆಕಿದು ಹಾಗೂ ಬಾಳುಗೋಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಮಾನಾಡು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಸುಮಾರು 20ಲಕ್ಷ ವೆಚ್ಚ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಿರು ಸೇತುವೆಯ ಗುದ್ದಲಿ ಪೂಜೆಯನ್ನು ಡಿ.25ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ ದೀಪ ಬೆಳಗಿಸಿ ತೆಂಗಿನಕಾಯಿ ಒಡೆಯುವ ಮೂಲಕ ನೆರವೇರಿಸಿದರು .
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ಸದಸ್ಯರುಗಳಾದ ಗಿರೀಶ್ ಪೈಲಾಜೆ, ಲಲಿತಾ ಗುಂಡಡ್ಕ, ಮೋಹಿನಿ ಅಂಗಣ, ರಾಜೇಶ್.ಎನ್.ಎಸ್, ಭಾರತಿ.ಬಿ.ಎನ್, ದಿಲೀಪ್ ಉಪ್ಪಳಿಕೆ, ಸವಿತಾ ಭಟ್, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹಿಮ್ಮತ್.ಕೆ.ಸಿ, ಐನೆಕಿದು-ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಯಪ್ರಕಾಶ್ ಕೂಜುಗೋಡು, ಮೋನಪ್ಪ ಮಾನಾಡು, ರಮೇಶ್ ಕೋನಡ್ಕ, ಗಿರಿಯಪ್ಪ ಕೋನಡ್ಕ, ಯಶವಂತ ಕೊಪ್ಪಳಗದ್ದೆ, ಅಜಿತ್ ಕಲ್ಲೇರಿ, ವಿನಯ್ ಅಂಗಣ, ವಿನೋದ್ ಅಂಗಣ, ಶಶಿಧರ್ ಕತ್ತಿಮಜಲು, ಅಶ್ವಥ್ ಕೋಡಿಕಜೆ, ಗುರುಕಿರಣ್ ಅಂಗಣ, ರಾಮಚಂದ್ರ ದೇವರಗದ್ದೆ, ನಾಗೇಶ್ ಕಣ್ಕಲ್, ಕುಮಾರ್ ದಡ್ಡು, ಶೇಷಪ್ಪ ಕತ್ತಿಮಜಲು, ಚಂದ್ರಶೇಖರ ಮಾನಾಡು, ಗಿರಿಯಪ್ಪ ದಡ್ಡು, ಗಧಾದರ ಅಂಗಣ, ಕುಸುಮಾವತಿ ಅಂಗಣ, ಸಾವಿತ್ರಿ, ಲೀಲಾವತಿ ಅಂಗಣ, ಗುತ್ತಿಗೆದಾರ ಮನುದೇವ್ ಪರಮಲೆ ಹಾಗೂ ಸೇತುವೆಯ ಫಲಾನುಭವಿಗಳು, ಗ್ರಾಮಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading