Ad Widget

ಕುಕ್ಕೆ ಸುಬ್ರಹ್ಮಣ್ಯ : 58 ಭಕ್ತಾದಿಗಳಿಂದ ಎಡೆ ಸ್ನಾನ ಉರುಳು ಸೇವೆ

ಸುಬ್ರಹ್ಮಣ್ಯ ಡಿಸೆಂಬರ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಇಂದು ಡಿ.26 ಶುಕ್ರವಾರದಂದು ದೇವಳದ ಹೊರಾಂಗಣದಲ್ಲಿ ನಡೆದ ಎಡೆ ಸ್ನಾನ ಉರುಳು ಸೇವೆಯಲ್ಲಿ 32 ಪುರುಷರು ಹಾಗೂ 26 ಮಹಿಳೆಯರನ್ನು ಒಳಗೊಂಡಂತೆ 58 ಹರಕೆ ಹೊತ್ತ ಮತ್ತು ಹರಕೆ ಸಲ್ಲಿಸುವ  ಭಕ್ತಾದಿಗಳು ಎಡೆಸ್ನಾನ  ಉರುಳು ಸೇವೆ ಸಲ್ಲಿಸಿದರು. ಚಂಪಾಷಷ್ಠಿ ಜಾತ್ರೋತ್ಸವದಲ್ಲಿ ಮೂರು ದಿನಗಳ ಕಾಲ ನಡೆದ ಎಡೆ ಸ್ನಾನ ಉರುಳು ಸೇವೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದವರು, ಅಥವಾ ಚರ್ಮವ್ಯಾಧಿ ಇತ್ಯಾದಿಗಳಿಗಾಗಿ ಹರಕೆ ಹೊತ್ತವರು ಹಾಗೂ ಪ್ರತಿ ವರ್ಷ ಕಿರುಷಷ್ಠಿಯಂದು ಸೇವೆ ಮಾಡುವ ಭಕ್ತಾದಿಗಳು ಇಂದು ಮಧ್ಯಾಹ್ನದ ಮಹಾಪೂಜೆ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ಸುತ್ತಲು ಹಾಕಿರುವ ಬಾಳೆ ಎಲೆಯಲ್ಲಿ ಈ ದೇವರಿಗೆ ಅರ್ಪಿಸಿದ ನೈವೇದ್ಯದ ಎಲ್ಲಾ ವಸ್ತುಗಳನ್ನು ಬಡಿಸಿ ತದನಂತರ ಶ್ರೀ ದೇವಳದ ಗೋವುಗಳಿಂದ ಅದನ್ನು ತಿನ್ನಿಸಿ ನಂತರ ದೇವಳದ ಮುಂಭಾಗದ ದರ್ಪಣ ತೀರ್ಥ ನದಿಯಲ್ಲಿ ಮಿಂದು ಹರಕೆ ಹೊತ್ತ ಭಕ್ತಾದಿಗಳು ಸರತಿಯ ಸಾಲಿನಲ್ಲಿ ಬಂದು ಅಂಗಣ  ಪ್ರವೇಶಿಸಿ ಬಾಳೆ ಎಲೆಯ ಮೇಲೆ ಶ್ರೀ ದೇವಳದ ಸುತ್ತಲೂ ಉರುಳು ಸೇವೆಯನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಾಸ್ತ್ರ ಪಂಡಿತರು, ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯವರು, ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳು ಎಡೆ ಸ್ನಾನ ಉರುಳು ಸೇವೆ ಸರಿಯಾಗಿ ನಡೆಯುವಂತೆ ನೋಡಿಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading