Ad Widget

ಸ್ವಚ್ಛತಾ ಅಭಿಯಾನದ ಅಂಗವಾಗಿ ಮಯೂರಿ ಯುವತಿ ಮಂಡಲದ ಸದಸ್ಯರಿಂದ ಬೀದಿ ನಾಟಕ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಡಿ.21ರಂದು ಸ್ವಚ್ಛತೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕುಕ್ಕುಜಡ್ಕ ವಠಾರದಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಯಿತು.

ಈ ಬೀದಿ ನಾಟಕವನ್ನು ಮಯೂರಿ ಯುವತಿ ಮಂಡಲದ ನಿರ್ದೇಶಕಿ, ರಂಗ ಭೂಮಿ ಕಲಾವಿದೆಯಾಗಿರುವ ಕುಮಾರಿ ಅರ್ಪಿತಾ ಕೇನಡ್ಕ ಅವರು ನಿರ್ದೇಶಿಸಿ ಅಭಿನಯಿಸಿದರು. ಜೊತೆಗೆ ಮಂಡಲದ ಮಾಜಿ ಕಾರ್ಯದರ್ಶಿ ಮಧುಶ್ರೀ ಕೇನಡ್ಕ ಹಾಗೂ ಸದಸ್ಯೆ ಕುಮಾರಿ ದಿಶಾ ಇಟ್ಟಿಗುಂಡಿ ಅವರು ನಾಟಕದಲ್ಲಿ ಸಕ್ರಿಯವಾಗಿ ಅಭಿನಯಿಸಿದರು. ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜವಾಬ್ದಾರಿಗಳ ಕುರಿತು ಸಂದೇಶ ನೀಡಿದ ಈ ಬೀದಿ ನಾಟಕವನ್ನು ಸಾರ್ವಜನಿಕರು ಅಪಾರ ಆಸಕ್ತಿಯಿಂದ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಗೌರವಾಧ್ಯಕ್ಷೆ ಸ್ವಾತಿ ಪಡ್ಪು  ನಿರ್ದೇಶಕರಾದ ಪವಿತ್ರ, ವೀಣಾ, ಪೂರ್ಣಿಮಾ, ಹೇಮಲತಾ, ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಧರ್ಮಸ್ಥಳ ಸಂಘದ ಸೇವಾನಿರತೆ ಶ್ರೀಮತಿ ದಿವ್ಯ, ಗರುಡ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತೀಶ್ ಪಿಲಿಕಜೆ ಉಪಸ್ಥಿತರಿದ್ದು,  ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading