Ad Widget

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ “ಸಹಕಾರಿ ಮೊಬೈಲ್ ಆ್ಯಪ್” ಬಿಡುಗಡೆ ; “ಸಹಕಾರಿ ಆ್ಯಪ್ ನಿಂದ ಪಾರದರ್ಶಕ ವ್ಯವಹಾರ” : ಎಸ್.ಎನ್.ಮನ್ಮಥ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ತನ್ನ ನಿರಂತರ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಗ್ರಾಮದ ಕೃಷಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಇದೀಗ ತಾಲೂಕಿನ ಸಹಕಾರಿ ಸಂಘಗಳಲ್ಲಿಯೇ ಪ್ರಥಮವಾಗಿ “ಸಹಕಾರಿ ಫೋನ್ ಆ್ಯಪ್” ಬಿಡುಗಡೆ ಮಾಡಿದೆ.
ಡಿ.22 ರಂದು ಸಂಘದ ಸಭಾಭವನದಲ್ಲಿ “ಸಹಕಾರಿ ಮೊಬೈಲ್ ಆ್ಯಪ್” ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕೃಷಿಕರಾದ ದಾಮೋದರ ಜಬಳೆಯವರು “ಸಹಕಾರಿ ಮೊಬೈಲ್ ಆ್ಯಪ್” ಅನ್ನು ಉದ್ಘಾಟಿಸಿ ಶುಭಹಾರೈಸಿದರು.
ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದು ಸಹಕಾರಿ ಸಂಘದಲ್ಲಿ ಸಹಕಾರಿ ಮೊಬೈಲ್ ಆ್ಯಪ ಅನ್ನು ಉದ್ಘಾಟನೆ ಮಾಡಿದ್ದೇವೆ. ಸದಸ್ಯರೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು. ರೋಹಿತ್ ಬಾಂಜಿಕೋಡಿಯವರು ಮೊಬೈಲ್ ಆ್ಯಪ್ ನ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಹೇಶ ಜಬಳೆ, ನಿರ್ದೇಶಕರಾದ ರವಿನಾಥ್ ಎಂ.ಎಸ್, ಶ್ರೀನಿವಾಸ್ ಮಡ್ತಿಲ, ನಟರಾಜ್ ಸಿ.ಕೂಪ್, ಮಧುಕರ್,ಸತೀಶ್ ಎಡಮಲೆ, ಚಂದ್ರಶೇಖರ.ಎಸ್, ಶ್ರೀಮತಿ ದಿವ್ಯಾ ಎಂ.ಆರ್, ಶ್ರೀಮತಿ ಭವಾನಿ ಎಂ.ಸಿ, ಪುರಂದರ ಶಾಂತಿಮೂಲೆ, ಅನಂತಕುಮಾರ್ ಖಂಡಿಗೆಮೂಲೆ, ರಾಜೇಂದ್ರ ಪಾತಿಕಲ್ಲು, ಗೋಪಾಲಕೃಷ್ಣ ಚೆನ್ನೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading