Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶ್ವ ಧ್ಯಾನ ದಿನಾಚರಣೆ ಪ್ರಯುಕ್ತ  ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಹಾಗೂ ಧ್ಯಾನ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯಿಂದ ದಿನಾಂಕ ಡಿ.21 ಭಾನುವಾರ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಮತ್ತು ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹರೀಶ್.ಎಸ್ ಇಂಜಾಡಿ ಅಧ್ಯಕ್ಷರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ವ್ಯವಸ್ಥಾಪನ ಸಮಿತಿ, ಗಣೇಶ್ ಪ್ರಸಾದ್ ನಾಯರ್ ಅಧ್ಯಕ್ಷರು ಕುಮಾರಸ್ವಾಮಿ ವಿದ್ಯಾಲಯ, ನಾರಾಯಣ ಶಿಬರಾಯ ಜಿಲ್ಲಾ ಸಂಚಾಲಕರು, ಪ್ರಭಾಕರ ಪಡ್ರೆ ಕಾರ್ಯಕ್ರಮ ಸಂಚಾಲಕರು ದೀಪ ಪ್ರಜ್ವಲನೆ ಮಾಡಿದರು.
ಬೆಳಗ್ಗೆ 4:30 ರಿಂದ 7:00  ರವರೆಗೆ ಕಾರ್ಯಕ್ರಮ ನಡೆಯಿತು.
ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರವನ್ನು ಶಿಕ್ಷಕರಾದ ಪ್ರೇಮಲತಾ ಶಿಕ್ಷಕರು ಬೆಳ್ತಂಗಡಿ ಇವರು ನಡೆಸಿಕೊಟ್ಟರು.
ಸಾಮೂಹಿಕ ಯೋಗ ಷಣ್ಮುಖ  ನಮಸ್ಕಾರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದೇವಿಚರಣ್ ಕುಂಬ್ರ                           ಇವರು ಷಣ್ಮುಖ ನಮಸ್ಕಾರ ಹಾಗೂ ಧ್ಯಾನದ ಮಹತ್ವ ತಿಳಿಸಿದರು.
                    
3 ಹಂತದಲ್ಲಿ 6 ಸುತ್ತು ಯೋಗ ಷಣ್ಮುಖ ನಮಸ್ಕಾರವನ್ನು  ತಾರಾನಾಥ, ಲಕ್ಷ್ಮೀ, ಭಾಸ್ಕರ ಇವರ ನೇತೃತ್ವದಲ್ಲಿ ನಡೆಯಿತು. ಶ್ರುತಿ ಶಿಕ್ಷಕರು ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ಅಮೃತಾಸನದೊಂದಿಗೆ ಧ್ಯಾನವನ್ನು ಶಿವಾನಂದ ರೈ ಇವರು ನಡೆಸಿಕೊಟ್ಟರು. ದ.ಕ. ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ ನಾಲ್ಕು ಸಾವಿರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಳದ ರಥಬೀದಿಯಲ್ಲಿ ಕಾರ್ಯಕ್ರಮ ಬೆಳಗ್ಗೆ 5:00 ಕ್ಕೆ ಆಯೋಜನೆ ಗೊಂಡಿದ್ದರೂ ಮುಂಜಾನೆ 3:00 ಗಂಟೆಗೆ ಅತ್ಯಂತ  ಶಿಸ್ತುಬದ್ಧವಾಗಿ ರಥಬಿದಿಯ ಫೂರ್ತಿ ಸಾಲಾಗಿ ಕುಳಿತು  ತನ್ಮಯತೆಯಿಂದ ಭಾಗವಹಿಸಿಕೊಂಡು ಯೋಗ ಷಣ್ಮುಖ ನಮಸ್ಕಾರ ಮಾಡಿದರು.

ಶನಿವಾರ ರಾತ್ರಿ ಬಂದಿರುವ ಯೋಗಬಂಧುಗಳು ದೇವಾಲಯದ ರಥಬೀದಿ ಸಹಿತ ಪರಿಸರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಪ್ರಾಂತ ಸಂಚಾಲಕರು ಸಂಘಟನಾ ವಿಭಾಗದ ಹರೀಶ್ ಕೋಟ್ಯಾನ್, ವಲಯ ಪ್ರಮುಖರಾದ ಅಶೋಕ್ ಜೈನ್, ಜಯರಾಮ ಚೆಂಬುಗುಡ್ಡೆ, ಪ್ರತಾಪ ರಾವ್, ಜಿಲ್ಲಾ ಪ್ರಮುಖರಾದ ಕನಕಾ ಅಮೀನ್, ಗಣೇಶ್ ಸುವರ್ಣ, ಲೋಕೇಶ್, ಈಶ್ವರ್ ಕೊಟ್ಟಾರಿ, ಶಿವಪ್ರಸಾದ್ ಪೊಳಲಿ, ಹರೀಶ್ ಅಂಚನ್, ಜಗದೀಶ್ವರ,ಮನೋಹರ್, ಜೀವನ್ ಶ್ರೀಕಲಾ, ಗೀತಾ ಉಳ್ಳಾಲ, ತಾಲೂಕು ಪ್ರಮುಖರಾದ ಯೋಗೀಶ್ ಆಚಾರ್ಯ, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಹರಿಪ್ರಸಾದ್, ವಸಂತ, ಮಾಧುರಿ, ಸುನಂದ ನಗರ ಸಂಚಾಲಕರು, ಶ್ರೀನಿವಾಸ್, ಜನಾರ್ದನ್, ಸುಂದರ, ಶ್ಯಾಮಲ, ಗುರುರಾಜ್ ,ಸದ್ಯೋಜಾತ್  ಉಪಸ್ಥಿತರಿದ್ದರು.
ಕಾರ್ತಿಕ್ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading