Ad Widget

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೂಡು ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಸುಳ್ಯ ನಗರ ಪಂಚಾಯತ್‌ ಅನುದಾನದಡಿ ಬೂಡು ವಾರ್ಡ್‌ನಲ್ಲಿ ಪ್ರಗತಿಯಲ್ಲಿರುವ ವಿವಿಧ ಜನಪರ ಕೆಲಸಗಳನ್ನು ಬೂಡು ವಾರ್ಡ್ ನ ನಿಕಟ ಪೂರ್ವ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ರವರು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ರವರೊಂದಿಗೆ ವೀಕ್ಷಿಸಿದರು.

ವಾಲಸಿರಿಮಜಲು ಪ್ರದೇಶದ ಚರಂಡಿ ದುರಸ್ತಿ ಹಾಗೂ ಸ್ಲ್ಯಾಬ್ ಅಳವಡಿಕೆ ಕಾರ್ಯ, ಬೂಡು ಪರಿಶಿಷ್ಟ ಜಾತಿ(SC) ಕಾಲೋನಿಯಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆ ಹಾಗೂ ಬೂಡು ಅಂಗನವಾಡಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆಮತ್ತು ಗುತ್ತಿಗೆದಾರರೊಂದಿಗೆ  ಕಾಮಗಾರಿ ಯ ವಿವರ ಪಡೆದುಕೊಂಡರು. 

ಈ ಸಂದರ್ಭದಲ್ಲಿ ಸ್ಥಳೀಯ ಧುರೀಣ ಮಾಧು ಬೂಡು, ನಗರ ಪಂಚಾಯತ್ ನಿಕಟ ಪೂರ್ವ ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading