Ad Widget

ಕೋಮಾ ಸ್ಥಿತಿಯಲ್ಲಿದ್ದ ಕೊಲ್ಲಮೊಗ್ರು ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ನಿಧನ

ಕೊಲ್ಲಮೊಗ್ರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ಅವರು ಡಿ.20ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೋ-ಬಿ.ಪಿ ಗೆ ಒಳಗಾಗಿ ಕೋಮಾ ಸ್ಥಿತಿಗೆ ಜಾರಿದ್ದ ಅವರು ಇಂದು(ಡಿ.20) ನಿಧನರಾದರು ಎಂದು ತಿಳಿದುಬಂದಿದೆ.
ಮೃತರಿಗೆ 40 ವರ್ಷ ವಯಸ್ಸಾಗಿತ್ತು, ಮೃತರು ಪತಿ ಕಮಲಾಕ್ಷ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಉತ್ತಮ ಸಂಘಟಕರಾಗಿದ್ದ ಇವರು ಕಳೆದ ವರ್ಷ ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದು ತಾವೇ ಹೆಣೆದಿದ್ದ ಹೂ ಬುಟ್ಟಿಯನ್ನು ರಾಷ್ಟ್ರಪತಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading