Ad Widget

“ಸ್ವದೇಶಿ ಬಳಸಿ-ದೇಶ ಬೆಳೆಸಿ” ಸ್ವದೇಶಿ ಜಾಗೃತಿ ಜಾಗರಣ ಸೈಕ್ಲಿಂಗ್ ಅಭಿಯಾನಕ್ಕೆ ಅರಂತೋಡಿನಲ್ಲಿ ಸ್ವಾಗತ

“ಸ್ವದೇಶಿ ಬಳಸಿ ದೇಶ ಬೆಳೆಸಿ” ಎಂಬ ಘೋಷ ವಾಕ್ಯದಡಿ, ಸಾಪ್ಟವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯ ಉಪಯೋಗಿಸುವ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ದೇಶದ ಆರ್ಥಿಕತೆಯನ್ನು ಬಳಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಸೇನಾಧಿಕಾರಿ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕೆಲಿಂಗ್ ಅಭಿಯಾನ ಬುಧವಾರ ಸುಳ್ಯ ತಾಲೂಕಿಗೆ ಆಗಮಿಸಿತು.                                  ಆರಂತೋಡಿನಲ್ಲಿ ಅಥಿತಿಗಳಿಗೆ ಆರತಿ ಬೆಳಗಿ ಭವ್ಯ ಸ್ವಾಗತ ನೀಡಲಾಯಿತು. ಆರಂತೋಡಿನ ನಾಗರಿಕರು, ಮಾತೆಯರು ಆರತಿ ಬೆಳಗಿ ತಿಲಕ ಹಚ್ಚಿ ಆದರದಿಂದ ಸ್ವಾಗತಿಸಿದರು. ಬ್ರಿಗೇಡಿಯರ್ ರವಿ ಮುನಿಸ್ವಾಮಿ ದೀಪ ಪ್ರಜ್ವಲನೆ ಮಾಡಿ ಭಾರತಮಾತೆಗೆ ಪುಷ್ಪರ್ಚನೆ ಮಾಡಿದರು. ಶಿವಾನಂದ ಕುಕ್ಕುಂಬಳರವರು ಜಾಥಾ ಬಗ್ಗೆ ಗ್ರಾಮಸ್ಥರ ಪರವಾಗಿ  ಸಂಘಕ್ಕೆ 100 ವರುಷದ ಸಂದರ್ಭದಲ್ಲಿ ಪಂಚ ಪರಿವರ್ತನೆ ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿದರು. ಜಾಥಾದ ಬಗ್ಗೆ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನಾಗರಿಕರಿಗೆ ಮಾಹಿತಿ ನೀಡಿದರು. ನಂತರ ಎಲ್ಲರಿಗೂ ಲಘು ಉಪಹಾರ ದೊಂದಿಗೆ ಕಾರ್ಯಕ್ರಮ ಸಮಾಪನಗೊಂಡು ಸುಳ್ಯ ಕಡೆಗೆ ತೆರಳಿದರು.

ಈ ಸಂದರ್ಭದಲ್ಲಿ ಮಾಜಿಸೈನಿಕರು ಆದ ಹುಕ್ರಪ್ಪ ಗೌಡ ಉಳುವಾರು, ಹರಿಶ್ಚಂದ್ರ ಅಳಿಕೆ, ಗಣಪತಿ ನಂಗಾರು, ರಾಜೇಶ್ ಕರಿಂಬಿ, ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಊರಿನ ಪ್ರಮುಖರಾದ ಸೋಮಶೇಖರ್ ಪೈಕ, ಕಿಶೋರ್ ಕುಮಾರ್ ಉಳುವಾರು, ಸಂತೋಷ್ ಕುತ್ತಮೊಟ್ಟೆ, ಸತೀಶ್ ನಾಯ್ಕ್, ದಯಾನಂದ ಕುರುಂಜಿ, ಚಂದ್ರ ಪ್ರಕಾಶ್ ಪಾನತ್ತಿಲ, ಡಾ. ಲಕ್ಶ್ಮೀಶ ಕಲ್ಲುಮುಟ್ಲು, ವಿಮಲಾ ಸೋಮಶೇಖರ್, ಭಾರತಿ ಪುರುಷೋತ್ತಮ, ಪುಷ್ಪಾ ಮೇದಪ್ಪ, ರೀನಾ ಚಂದ್ರಶೇಖರ್, ಲತಾ ಶಿವಪ್ರಸಾದ್ ಹಾಗೂ  ನಾಗರಿಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading