Ad Widget

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಂಥಾಲಯ ಮೇಲ್ವಿಚಾರಕರಿಂದ ಜಿಲ್ಲಾ ಪಂಚಾಯತ್ ಸಿಒಇ ಗೆ ಮನವಿ

ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ ವೇತನ ವಾವತಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ, ವೇತನವನ್ನು ಸಕಾಲಿಕವಾಗಿ ಪಾವತಿಸುವ  ಬಗ್ಗೆ ಮತ್ತು ಪಿ.ಎಫ್, ಇ.ಎಸ್.ಐ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಮೇಲ್ವಿಚಾರಕರು  ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿನಾಯಕ್ ನರ್ವಡೆ IAS ಅವರಿಗೆ ಡಿ.18 ರಂದು  ಮನವಿ ನೀಡಿ ಒತ್ತಾಯಿಸಿದ್ದಾರೆ.

ದ.ಕ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ ಕಳೆದ ಆಗಸ್ಟ್ ತಿಂಗಳಿನಿಂದ ಹೆಚ್ಚುವರಿ ವೇತನ ಪಾವತಿಯಾಗಿರುವುದಿಲ್ಲ, ಮತು ಗ್ರಾಮ ಪಂಚಾಯತ್ ಗಳಲ್ಲಿ ಮಾಸಿಕವಾಗಿ ಸಿಗುವ 12000 ರೂಪಾಯಿ ವೇತನವೂ ಕೂಡ ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಅರಿವು ಕೇಂದ್ರ ಮೇಲ್ವಿಚಾರಕರು ಆರ್ಥಿಕವಾಗಿ ತೀವ್ರ ಸಮಸ್ಯೆಗೆ ಒಳಗಾಗುತ್ತಿದ್ದು, ವಿಳಂಬವಾಗುತ್ತಿರುವ ವೇತನವನ್ನು ಸಕಾಲಕ್ಕೆ ಸಿಗುತ್ತಿಲ್ಲ. ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಪಿ.ಎಫ್ ಮತ್ತು ಇ.ಎಸ್.ಐ ಒದಗಿಸಿಕೊಡಲು ಅವಕಾಶವಿದ್ದು, ಅರಿವು ಕೇಂದ್ರ ಮೇಲ್ವಿಚಾರಕರು ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದವರೇ ಇರುವುದರಿಂದ ಅರಿವು ಕೇಂದ್ರ ಮೇಲ್ವಿಚಾರಕರಿಗೆ ಸೌಲಭ್ಯ ಒದಗಿಸುವಂತೆ, ಅರಿವು ಕೇಂದ್ರ ಮೇಲ್ವಿಚಾರಕರ ಜಿಲ್ಲಾ ಮಟ್ಟದ ಸಭೆ ಕರೆಯುವ ಬಗ್ಗೆ, ಮೇಲ್ವಿಚಾರಕರಿಗೆ ಸಂಜೆಯ ವೇಳೆ ಏಳು ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲು ಆಗುವ ತೊಡಕುಗಳ ಬಗ್ಗೆ, ಕೆಲವು ಕಡೆ ಕಟ್ಟಡದ ಕೊರತೆ, ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸುವ ಬಗ್ಗೆ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ಮೇಲ್ವಿಚಾರಕಾರರ ಸಂಘದ ಅಧ್ಯಕ್ಷರಾದ ಸಾವಿತ್ರಿ ಕಣೆಮರಡ್ಕ, ಕಾರ್ಯದರ್ಶಿ ವರುಣ್ ನರಿಮೊಗ್ರ ಹಾಗೂ  ಮೇಲ್ವಿಚಾರಕರು ಉಪಸ್ಥಿತರಿದ್ದರು.

ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಗ್ರಂಥಾಲಯದಲ್ಲಿ ಮುಖ್ಯಗ್ರಂಥಾಲಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮಮತಾ ರವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ  ಗ್ರಂಥಾಲಯ ಮೇಲ್ವಿಚಾರರ ಪರವಾಗಿ ಅಭಿನಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading