Ad Widget

ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 10.82 ಕೋಟಿ ಅನುದಾನ

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ವಿಧಾನಸಭಾ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ 10.82 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.

ಕಾಮಗಾರಿಗಳು ವಿವರ : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಣಿಯೂರು-ನಾಣಿಲ-ಚಾರ್ವಾಕ-ಬರೆಪ್ಪಾಡಿ ಜಿಲ್ಲಾ ಮುಖ್ಯ ರಸ್ತೆಯ ಕಾಪೆಜಾಲು ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಒಂದು ಕೋಟಿ ರೂ., ಸುಳ್ಯ-ಪೈಚಾರು-ಬೆಳ್ಳಾರೆ-ಸವಣೂರು- ಕುದ್ಮಾರ್-ಅಲಂಕಾರು ಸುರುಳಿ-ಮಾದೇರಿ-ಪಟ್ರಮೆ- ಧರ್ಮಸ್ಥಳ-ಮುಂಡಾಜೆ- ದಿಡುಪೆ ರಸ್ತೆಯ ಕಿ.ಮೀ 32.60ರ ಬಲ ಬದಿಯಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಹಾಗೂ ಕಿ.ಮೀ 23.60ರ ಎಡ ಬದಿಯಲ್ಲಿ ಕುಸಿದ ಬಾಗಕ್ಕೆ ತಡೆಗೋಡೆ ನಿರ್ಮಿಸುವುದು ಒಂದು ಕೋಟಿ, ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಬೈತಡ್ಕದಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 50ಲಕ್ಷ‌ ರೂ. ಅನುದಾನ,  ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಕಿ.ಮೀ.27 ರಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ, ಕಡಬ ತಾಲೂಕು ಐತೂರು ಗ್ರಾಮದ ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿಯ ಬೀಡು ಎಂಬಲ್ಲಿ ತಡೆಗೋಡೆ ನಿರ್ಮಾಣಕ್ಕೆ 65 ಲಕ್ಷ ರೂ. ಅನುದಾನ,  ಅರಂತೋಡು-ತೊಡಿಕಾನ ರಸ್ತೆಯ ಅಡ್ಯಡ್ಕ ಎಂಬಲ್ಲಿ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ ಅನುದಾನ, ಕಡಬ ತಾಲೂಕಿನ  ಕೊಂಬಾರು ಗ್ರಾಮದ ಕರ್ಮಕಜೆ–ಬಾರ್ಯ ರಸ್ತೆಯಲ್ಲಿ ಕರ್ಮಕಜೆ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಸೇತುವೆ ನಿರ್ಮಾಣಕ್ಕೆ  ರೂ.50 ಲಕ್ಷ ಅನುದಾನ,
ಕಡಬ ತಾಲೂಕಿನ ಕಡಬ ಹಳೇಸ್ಟೇಷನ್ ಕಡಬ ತಾಲೂಕು ಪಂಚಾಯತ್ ಹತ್ತಿರ ರಸ್ತೆ ಬದಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 90 ಲಕ್ಷ ಅನುದಾನ, ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಬೈಲು ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಸೇತುವೆ ನಿರ್ಮಾಣಕ್ಕೆ 60 ಲಕ್ಷ ಅನುದಾನ, ಕಡಬ ತಾಲೂಕು ಅಲಂಕಾರು ಗ್ರಾಮದ ಕಕ್ಷೆಲ ಎಂಬಲ್ಲಿ ರಸ್ತೆ ಬದಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ಅನುದಾನ, ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಮ್ಮಡ್ಕ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ 20 ಲಕ್ಷ, ಮರ್ಧಾಳ ಗ್ರಾ.ಪಂ.ವ್ಯಾಪ್ತಿಯ ಪಿಲಿಮಜಲು ಎಂಬಲ್ಲಿ ರಸ್ತೆಯ ಕುಸಿದ ಭಾಗಕ್ಕೆ ತಡೆಗೋಡೆಗೆ 22 ಲಕ್ಷ ಅನುದಾನ, ಕಾಣಿಯೂರು ಗ್ರಾಮದ ಪುಣ್ಯತ್ತಾರು-ದೋಳ್ವಾಡಿ ರಸ್ತೆ ಬದಿ ಕುಸಿದ ಭಾಗಕ್ಕೆ ತಡೆಗೋಡೆಗೆ 10 ಲಕ್ಷ ಅನುದಾನ, ಕಳಂಜ ಗ್ರಾಮದ ಬೆಳ್ಳಾರೆ ಶೇಣಿ ರಸ್ತೆಯ ತಂಟೆಪ್ಪಾಡಿ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ಅನುದಾನ, ಆಲೆಟ್ಟಿ ಗ್ರಾಮದ ಕೂಟೇಲು ಸೇತುವೆಯ ಕುಸಿದ ಭಾಗಕ್ಕೆ ಸಂರಕ್ಷಣಾ ಕಾಮಗಾರಿಗೆ 50 ಲಕ್ಷ ಅನುದಾನ, ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ರಸ್ತೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 10 ಲಕ್ಷ ಅನುದಾನ, ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯಲ್ಲಿರುವ ಸೇತುವೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ಅನುದಾನ, ಪೆರುವಾಜೆ ಗ್ರಾಮದ ಮಠತ್ತಡ್ಕದಲ್ಲಿ ಕುಸಿದ ಭಾಗದ ಸಂರಕ್ಷಣಾ ಕಾರ್ಯಕ್ಕೆ ರೂ. ಒಂದು ಕೋಟಿ ಅನುದಾನ, ಕೊಲ್ಲಮೊಗ್ರು ಗ್ರಾಮದ ಇನ್ನೂರು ಸೇತುವೆ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 35 ಲಕ್ಷ ಅನುದಾನ, ಬೆಳ್ಳಾರೆ ಗ್ರಾಮದ ಬೆಳ್ಳಾರೆ-ಶೇಣಿ ರಸ್ತೆಯ ಗೌರಿಹೊಳೆ ಸೇತುವೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ಅನುದಾನ, ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಜಾರಿಕೋಡಿ ಎಂಬಲ್ಲಿ ಸೇತುವೆ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ಸಂರಕ್ಷಣಾ ಕಾಮಗಾರಿ 60 ಲಕ್ಷ ರೂ. ಬಿಡುಗಡೆಯಾಗಿರುವುದಾಗಿ ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading