Ad Widget

ಡಿಸೆಂಬರ್ 21 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯ ಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

ಸುಬ್ರಹ್ಮಣ್ಯ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಕೇಂದ್ರ ಕಚೇರಿ, ಮಂಗಳೂರು ಪ್ರಾದೇಶಿಕ ಕಚೇರಿ ಇದರ ವತಿಯಿಂದ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಡಿಸೆಂಬರ್ 21 ರಂದು ರವಿವಾರ ಕುಕ್ಕೆ ಸುಬ್ರಹ್ಮಣ್ಯದ ವಿಶಾಲವಾದ ರಥ ಬೀದಿಯಲ್ಲಿ ನಡೆಯಲಿರುವುದು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಕೋಲಾರ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಹಾಸನ, ಮೈಸೂರು, ಮಂಗಳೂರು, ಉಡುಪಿ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಮುಂತಾದ ಕಡೆಗಳಿಂದ ಸುಮಾರು 3000ಕ್ಕೂ ಅಧಿಕ ಯೋಗ ಬಂಧುಗಳು ಷಣ್ಮುಖ ನಮಸ್ಕಾರ ಸಾಮೂಹಿಕ ಯೋಗ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ರವಿವಾರ ಬೆಳಿಗ್ಗೆ 5:00 ಗಂಟೆಯಿಂದ 7:00 ಗಂಟೆಯ ತನಕ ನಿರಂತರವಾಗಿ ಭಜನೆ, ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಕ್ರಿಯಾತ್ಮಕ ಅಭ್ಯಾಸಗಳು, ಷಣ್ಮುಖ ನಮಸ್ಕಾರದೊಂದಿಗೆ ನಡೆಯಲಿರುವುದು.

ವಿವಿಧ ಕಡೆಗಳಿಂದ ಬರುವ ಯೋಗ ಬಂಧುಗಳಿಗೆ ರಾತ್ರಿ ತಂಗಲು ಸ್ಥಳೀಯ ವಿದ್ಯಾಸಂಸ್ಥೆಗಳಾದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಕೆ.ಎಸ್.ಎಸ್ ಕಾಲೇಜು ಹಾಗೂ ಕುಮಾರಸ್ವಾಮಿ ವಿದ್ಯಾಲಯಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಳದ ವತಿಯಿಂದ ರಾತ್ರಿ ಭೋಜನ ಬೆಳಗ್ಗೆ ಫಲಹಾರ ಹಾಗೂ ಮಧ್ಯಾಹ್ನ ಊಟ ವ್ಯವಸ್ಥೆ ಕೂಡ ಇರುತ್ತದೆ.

ಸಾಮೂಹಿಕ ಷಣ್ಮುಖ ನಮಸ್ಕಾರದ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ ಇಂಜಾಡಿ ನೆರವೇರಿಸಲಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹಾಗೂ ಪ್ರಾಂತೀಯ, ಜಿಲ್ಲಾ ಸಂಯೋಜಕರು ಹಾಗೂ ಸಂಚಾಲಕರು  ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading