Ad Widget

ಕುಕ್ಕೆ ಸುಬ್ರಹ್ಮಣ್ಯ ನೂಚಿಲ ಬೈಲುವಾರು ದೈವಗಳ ನೇಮೊತ್ಸವದ ತಯಾರಿ ಬಗ್ಗೆ ಪೂರ್ವಭಾವಿ ಸಭೆ ; ಅಧ್ಯಕ್ಷರಾಗಿ ನಿತಿನ್ ಭಟ್ ನೂಚಿಲ ಆಯ್ಕೆ

ಕುಕ್ಕೆ ಸುಬ್ರಮಣ್ಯದ ನೂಚಿಲ ಪಂಜುರ್ಲಿಗುಡ್ಡೆ ಎಂಬಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ದೈವಗಳ ನೇಮೋತ್ಸವವು ನಡೆಯುತಿದ್ದು, ಈ ಧೈವಸ್ಥಾನಕ್ಕೆ ಸುಮಾರು 150 ವರ್ಷಕ್ಕೂ ಅಧಿಕ ಇತಿಹಾಸವಿರುತ್ತದೆ. ಈ ದೈವಸ್ಥಾನಕ್ಕೆ ಊರ ಹಾಗೂ ಪರ ಊರಿನಿಂದ ಸಾವಿರಾರು ಭಕ್ತರು ತಮ್ಮ ಕಷ್ಟ ನಿವಾರಣೆಗೆಂದು ಹರಕೆ ಹೊತ್ತು ಬರುತಿದ್ದು, ಇದಕ್ಕೆ ಪ್ರತಿಫಲವನ್ನು ಕಂಡುಕೊಂಡ ಉದಾಹರಣೆ ಹಲವಾರು ಇವೆ. 2026ನೇ ಸಾಲಿನ ದೈವಗಳ ನೆಮೋತ್ಸವವು ಇದೇ ಬರುವ ಫೆಬ್ರವರಿ ತಿಂಗಳ 12ರ ಕುಂಭ ಸಂಕ್ರಮಣದಂದು ಬೆಳಗ್ಗಿನ ಜಾವ ವಿವಿಧ ವೈಧಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಸಂಜೆ 4.00 ರ ನಂತರ ದೈವಗಳ ಬಂಡಾರ ತೆಗೆದು ಮರುದಿನ 13 ರ ಬೆಳ್ಳಗ್ಗಿನ ತನಕ ರಕ್ತೇಶ್ವರಿ, ಮೈಸಂದಾಯ, ಪಂಜುರ್ಲಿ,ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವವು ನಡೆಯಲಿರುತ್ತದೆ.

ದೈವಸ್ಥಾನದ ಸಮೀತಿ ರಚನೆ : ಗೌರವಾಧ್ಯಕ್ಷರಾಗಿ ಜಯರಾಮ್ ರಾವ್ ನೂಚಿಲ, ಅಧ್ಯಕ್ಷರಾಗಿ ನಿತಿನ್ ಕುಮಾರ್ ಭಟ್ ನೂಚಿಲ, ಉಪಾಧ್ಯಕ್ಷರಾಗಿ ರಮೇಶ್ ಭಟ್ ನೂಚಿಲ, ಖಜಾಂಜಿಯಾಗಿ ಸುಬ್ರಹ್ಮಣ್ಯ ರಾವ್ ನೂಚಿಲ, ಕಾರ್ಯದರ್ಶಿಯಾಗಿ ದಿಲೀಶ.ಏನ್.ಡಿ. ಆಯ್ಕೆಯಾದರು.

ನಂತರ ಪೂರ್ವಭಾವಿ ಸಭೆ ನಡೆಯಿತು. ಈ ಸಂಧರ್ಭದಲ್ಲಿ ದೈವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್, ಪ್ರಸಾದ್ ಕಲ್ಲೂರಾಯ ನೂಚಿಲ, ಗಣೇಶ್ ನಾಯರ್ ನೂಚಿಲ, ರಮೇಶ್ ಭಟ್ ನೂಚಿಲ, ಸೂರ್ಯ ಭಟ್ ನೂಚಿಲ, ರವೀಂದ್ರ.ಕೆ ನೂಚಿಲ, ರತ್ನಾಕರ್ ಶೆಟ್ಟಿ ನೂಚಿಲ, ಉದಯ ಕುಮಾರ್ ನೂಚಿಲ, ಸಂತೋಷ್ ಕುಮಾರ್.ಕೆ ನೂಚಿಲ, ದೇವಣ್ಣ ಗೌಡ ನೂಚಿಲ, ರೆಗಪ್ಪ ಗೌಡ ನೂಚಿಲ, ಜೆ ಬಾಲಕೃಷ್ಣ ನೂಚಿಲ, ಶಿನಪ್ಪ ನಾಯ್ಕ್ ನೂಚಿಲ, ಶ್ರೀಧರ ಗೌಡ ನೂಚಿಲ, ಬಾಲಕೃಷ್ಣ ನೂಚಿಲ, ಮೋನಪ್ಪ.ಡಿ ಸುಬ್ರಹ್ಮಣ್ಯ ಹಾಗೂ ಸ್ಥಳಿಯ ಮಹಿಳೆಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading