Ad Widget

ಮಾನವೀಯತೆ ಮೆರೆದ ಮಯೂರಿ ಯುವತಿ ಮಂಡಲದ ಸದಸ್ಯರು

ಚೊಕ್ಕಾಡಿ ಪೇಟೆಯ ಪರಿಸರದ ಮಾರ್ಗದಲ್ಲಿ ಜೀಪಿನಡಿಗೆ  ಬಿದ್ದು ಮೃತಪಟ್ಟಿದ್ದ ನಾಯಿಯ ಶವದಿಂದ ಪರಿಸರಕ್ಕೆ ಅಸೌಚ್ಯ ಉಂಟಾಗುತ್ತಿದ್ದುದನ್ನು ಗಮನಿಸಿದ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ ಸದಸ್ಯರು ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದರು.

ನಾಯಿಯ ಶವವನ್ನು ಸುರಕ್ಷಿತವಾಗಿ ತೆರವುಗೊಳಿಸಿ,  ಅದನ್ನು ಹೊಂಡ ತೆಗೆದು ಹೂತು ಹಾಕಿ ಯುವತಿ ಮಂಡಲದ ಸದಸ್ಯರು ಪರಿಸರದ ಸ್ವಚ್ಛತೆಯನ್ನು ಕಾಪಾಡಿದರು.  ಗರುಡ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತೀಶ್ ಪಿಲಿಕಜೆ ಇವರು ಜೊತೆಗಿದ್ದು ಸಹಕರಿಸಿದರು.

ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ತೋರಿದ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading