Ad Widget

ಸುಬ್ರಹ್ಮಣ್ಯ – ಪಾಲಕ್ಕಾಡ್ ಕೇರಳ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭ

ಸುಬ್ರಹ್ಮಣ್ಯ ಡಿಸೆಂಬರ್ 14 : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಪಾಲಕ್ಕಾಡ್ ನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೇವೆಯನ್ನು ಆರಂಭಿಸಿದೆ.
ಈ ಬಸ್ಸು ಸುಬ್ರಹ್ಮಣ್ಯದಿಂದ ರಾತ್ರಿ 7:45 ಸುಳ್ಯದಿಂದ ಹೊರಟು ಮುಲೇರಿಯಾ, ಕಾಸರಗೋಡು, ಕಾಂಞಗಾಡ್, ಪಯ್ಯನೂರು, ಕಣ್ಣೂರು, ಕ್ಯಾಲಿಕಟ್ ಮಾರ್ಗವಾಗಿ ಪಾಲಕ್ಕಾಡ್ ಅನ್ನು ಬೆಳಿಗ್ಗೆ 5:00 ತಲುಪಲಿದೆ. ಸಂಜೆ 7:00 ಗಂಟೆಗೆ ಅಲ್ಲಿಂದ ಪ್ರಯಾಣ ಆರಂಭಿಸಿ ಬೆಳಿಗ್ಗೆ 4:00 ಗಂಟೆಗೆ  ಸುಳ್ಯಕ್ಕೆ ಬಂದು ಅಲ್ಲಿಂದ 5:00 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಲಿರುವುದಾಗಿ ಸುಬ್ರಹ್ಮಣ್ಯ ಸಂಚಾರ ನಿಯಂತ್ರಕರಾದ ಜಗದೀಶ್ ಅವರು ತಿಳಿಸಿದ್ದಾರೆ. ಕೇರಳಕ್ಕೆ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಕೇರಳದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಪ್ರಯಾಣಿಕರಿಗೆ ಈ ಬಸ್ಸು ಅನುಕೂಲಕರವಾಗಿದೆ ಎಂದು ಅವರು ತಿಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading