Ad Widget

ಡಿ.15 ಹಾಗೂ 16 ರಂದು ಬೆಳ್ಳಾರೆ ಕೆ.ಪಿ.ಎಸ್ ಶಾಲೆಯಲ್ಲಿ ರೋವರ್ ರೇಂಜರ್ಸ್ ಸಮಾಗಮ ಹಾಗೂ ಸ್ಕೌಟ್ಸ್ ಗೈಡ್ಸ್ ಮೇಳ 2025-26

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಮತ್ತು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲಿನ ಸಹಭಾಗಿತ್ವದಲ್ಲಿ ಡಿ.15 ಹಾಗೂ 16ರಂದು ರೋವರ್ ರೇಂಜರ್ಸ್ ಸಮಾಗಮ ಮತ್ತು ಸ್ಕೌಟ್ಸ್ ಗೈಡ್ಸ್ ಮೇಳ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ.
ಬೆಳಿಗ್ಗೆ 11:30ಕ್ಕೆ ಉದ್ಘಾಟನೆ ಜರುಗಲಿದ್ದು ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ
ನೆರವೇರಿಸಲಿದ್ದಾರೆ.
ಬೆಳ್ಳಾರೆ ಗ್ರಾಮ
ಪಂಚಾಯತ್ ಅಧ್ಯಕ್ಷರಾದ ನಮಿತಾ.ಎಲ್ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ದಿನೇಶ್ಚಂದ್ರ ಹೆಗ್ಡೆ, ಶ್ರೀಮತಿ ಗೌರಿ ನೆಟ್ಟಾರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಕಾರ್ಯಾಧ್ಯಕ್ಷರಾದ ಶೀತಲ್ ಯು.ಕೆ, ದ.ಕ ಜಿಲ್ಲಾ ಗೈಡ್ಸ್ ಆಯುಕ್ತರಾದ ವಿಮಲಾ ರಂಗಯ್ಯ, ದ.ಕ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿಯಾದ ಪ್ರತೀಮ್ ಕುಮಾರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ.ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2:30ರಿಂದ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯಲಿದ್ದು, ಬೆಳ್ಳಾರೆ ಪ್ರಾಥಮಿಕ
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಕಿರಣ್ ಉದ್ಘಾಟಿಸಲಿದ್ದಾರೆ.
ಅಭ್ಯಾಗತರಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ, ಶ್ರೀಮತಿ ನಸೀಮಾ, ಬೆಳ್ಳಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಸಿ.ವಿ ಉಪಸ್ಥಿತರಿರಲಿದ್ದಾರೆ.

ಅಪರಾಹ್ನ ಘಂಟೆ 4:00ರಿಂದ ನಗರ ಮೆರವಣಿಗೆ ಜರುಗಲಿದ್ದು, ಬೆಳ್ಳಾರೆ ಪೊಲೀಸ್ ಠಾಣಾ ಎಸ್.ಐ ಈರಯ್ಯ ದೂಂತೂರು ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ಬೆಳ್ಳಾರೆ ರತ್ನಾ ಎಲೆಕ್ಟ್ರಿಕಲ್ಸ್ ನ ಪ್ರಮೋದ್ ಕುಮಾರ್ ರೈ ಕುಂಟುಪುಣಿಗುತ್ತು, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಸಂಜಯ್ ನೆಟ್ಟಾರು ಉಪಸ್ಥಿತರಿರಲಿದ್ದಾರೆ.

ರಾತ್ರಿ ಗಂಟೆ 8:00 ರಿಂದ ಶಿಬಿರಾಗ್ನಿ ನಡೆಯಲಿದ್ದು ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲಿನ ಸಂಚಾಲಕರಾದ ಉಮೇಶ್ ಎಂ.ಪಿ
ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ್ ದಾಸ್ ಎನ್.ಎಸ್.ಡಿ, ಚಂದ್ರಶೇಖರ್ ಪನ್ನೆ, ಅನಿಲ್ ರೈ ಪುಡ್ಕಜೆ, ಬೆಳ್ಳಾರೆ ಜೆ.ಸಿ.ಐ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಬೀಡು, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಉಮೇಶ್ ಮಣಿಕ್ಕಾರ, ಬೆಳ್ಳಾರೆ ಎಸ್.ಕೆ.ಎಸ್.ಎಸ್.ಎಫ್ ಘಟಕಾಧ್ಯಕ್ಷರಾದ ಆಶಿಕ್ ಮಂಗಳ, ಭಾರತೀಯ ಸೇನೆಯ ಸೈನಿಕರಾದ ರತ್ನಾಕರ, ಬೆಳ್ಳಾರೆ ಕೆ.ಪಿ.ಎಸ್ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ಬೆಳ್ಳಾರೆ ಕೆ.ಪಿ.ಎಸ್ ಕಳೆದ ವಸಂತ ಸಂಭ್ರಮದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪ್ರದೀಪ್ ಕುಮಾರ್ ರೈ ಪನ್ನೆ ಉಪಸ್ಥಿತರಿರಲಿದ್ದಾರೆ.

ಡಿ‌.16ರಂದು ಪೂರ್ವಾಹ್ನ 7:00ರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಲಿದ್ದು,
ಅಭ್ಯಾಗತರಾಗಿ ಹಿಂದೂ ಧಾರ್ಮಿಕ ಚಿಂತಕರಾದ ರಾಮಕೃಷ್ಣ ಭಟ್ ಚೂಂತಾರು, ಬೆಳ್ಳಾರೆ ಪವಿತ್ರ ಶಿಲುಬೆ ಚಾಪೆಲಿನ ಧರ್ಮಗುರುಗಳಾದ‌ ವಂದನೀಯ ಫಾದರ್ ಡಾ. ಆಂಟನಿ ಪ್ರಕಾಶ್ ಮೊಂತೆರೊ, ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದ ಪ್ರಧಾನ ಅಧ್ಯಾಪಕರಾದ ಮುಹಮ್ಮದ್ ನವವಿ ಮುಂಡೋಳೆ ಉಪಸ್ಥಿತಿತರಿರಲಿದ್ದಾರೆ.

ಅಪರಾಹ್ನ 2:00ರಿಂದ ಸಮಾರೋಪ ಸಮಾರಂಭ ಜರುಗಲಿದ್ದು, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಅಧ್ಯಕ್ಷರಾದ ಮಾಧವ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹರಕ್ಷಕ ದಳ ಮಂಗಳೂರು ಸಮಾದೇಸ್ಟರಾದ ಮುರಳೀಮೋಹನ್ ಚೂಂತಾರು ಸಮಾರೋಪ ಭಾಷಣ ನೀಡಲಿದ್ದಾರೆ. ಅಭ್ಯಾಗತರಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವೀಣಾ, ಸದಸ್ಯರಾದ ಮಣಿಕಂಠ, ಶ್ರೀಮತಿ ಭವ್ಯ ಆರ್, ಶ್ರೀಮತಿ ಮೋಹಿನಿ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸೋಸಿಯೆಷನ್ ಪ್ರೊಫೆಸರ್ ಪದ್ಮನಾಭ.ಕೆ ಉಪಸ್ಥಿತರಿರಲಿದ್ದಾರೆ.

ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading