Ad Widget

ಬೋರುಗುಡ್ಡೆ ವಾರ್ಡ್ ಕನಿಕರಪಳ್ಳ 2ನೇ ಅಡ್ಡ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರ ಅನುದಾನದಡಿಯಲ್ಲಿ  ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಬಾಗದ ಕನಿಕರಪಳ್ಳ 2ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, ಉದ್ಘಾಟನೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಾಫ ಮತ್ತು ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಕೆ.ಎಸ್ ಉಮ್ಮರ್ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಉಮ್ಮರ್ “ನಡೆದಾಡಲೂ ಸಾಧ್ಯವಾಗದೆ ದುಸ್ಥಿತಿಯಲ್ಲಿದ್ದ 2ನೇ ಅಡ್ಡ ರಸ್ತೆ ಸರ್ವಋತು ರಸ್ತೆಯಾಗಿ ಕಾಂಕ್ರಿಟಿಕರಣ ಕಾಮಗಾರಿಯಾಗಬೇಕೆಂದು ಇಲ್ಲಿನ ನಿವಾಸಿಗಳ ಬಹು ಕಾಲದ ಬೇಡಿಕೆಯಾಗಿತ್ತು. ಕಾಮಗಾರಿಯ ಸಂದರ್ಭದಲ್ಲಿ ನಿವಾಸಿಗಳ ಉತ್ತಮ ರೀತಿಯ ಸಹಕಾರದಿಂದ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣ ವಾಗಲು ಸಾಧ್ಯವಾಗಿದೆ” ಎಂದರು

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಇಂದಿರಾ ಟೀಚರ್, ರಫೀಕ್, ಕುಶಾಲಪ್ಪ, ರವಿ, ರಫೀಕ್, ಸಿಯಾದ್, ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading