Ad Widget

ಸುಬ್ರಹ್ಮಣ್ಯ : ನಾಳೆ(ಡಿ.12) ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ಬೆಳೆವಿಮೆ ವಂಚಿತ ಕೃಷಿಕರ ಸಮಾಲೋಚನಾ ಸಭೆ”

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಾಳೆ(ಡಿ.12) ಬೆಳಿಗ್ಗೆ 10:30ಕ್ಕೆ ಸುಬ್ರಹ್ಮಣ್ಯದ ಸೊಸೈಟಿಯ ಹತ್ತಿರ “ಬೆಳೆ ವಿಮೆ ವಂಚಿತ ಕೃಷಿಕರ ಸಮಾಲೋಚನಾ ಸಭೆ”ಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, “ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೃಷಿಕರು ಕಳೆದ ಸಾಲಿನಲ್ಲಿ ದಾಖಲಾಗಿರುವ ವಿಪರೀತ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮೊತ್ತದ ವಿಮಾ ಪರಿಹಾರವೂ ಜಮೆಯಾಗಿದ್ದು, ಇದು ಮುಂದೆ ಉಳಿದ ಮೊತ್ತ ಬರುವುದು ಸಂಶಯವಾಗಿದೆ. ಆದ್ದರಿಂದ ಕೃಷಿಕರೆಲ್ಲರೂ ತಕ್ಷಣ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರುವಲ್ಲಿ ಹಾಗೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಬಗ್ಗೆ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ. ಅದೇ ರೀತಿ ಪ್ರಸ್ತುತ ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರುವ ಕಾರ್ಯವೂ ಆಗಬೇಕಾಗಿದೆ. ಆದ್ದರಿಂದ ಬೆಳೆ ವಿಮೆ ವಂಚಿತ ಕೃಷಿಕ ವರ್ಗದವರು ಸರ್ಕಾರದ ಸವಲತ್ತುಗಳನ್ನು ಯಾವುದೇ ಲಂಚ-ಭ್ರಷ್ಟಚಾರವಿಲ್ಲದೇ ಹಾಗೂ ವಂಚನೆಗೊಳಗಾಗದೇ ಪಡೆಯುವ ನಿಟ್ಟಿನಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳುವ ಸಲುವಾಗಿ ಬೆಳೆ ವಂಚಿತ ಕೃಷಿಕರೆಲ್ಲರೂ ಈ ಸಭೆಗೆ ಹಾಜರಾಗಬೇಕು” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading