Ad Widget

ಉಬರಡ್ಕದಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ – “ಮಾಸ್ ಸಂಸ್ಥೆಯೂ ರೈತರಿಂದ ಉತ್ತಮ ಬೆಲೆಗೆ ಅಡಿಕೆ ಖರೀದಿಸುತ್ತಿದೆ” : ಸವಣೂರು ಸೀತಾರಾಮ ರೈ

“ಉಬರಡ್ಕದಲ್ಲಿಯೇ ಅಡಿಕೆ ಖರೀದಿ ಕೇಂದ್ರ ಆಗಿರುವುದರಿಂದ ರೈತರಿಗೆ ಸಹಕಾರಿಯಾಗಲಿದೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಿ, ಮಾಸ್ ನಲ್ಲಿಯೂ ಉತ್ತಮ ಬೆಲೆ ನೀಡಿ ಅಡಿಕೆ ಖರೀದಿ ಮಾಡುತ್ತೇವೆ” ಎಂದು ಮಾಸ್ ಲಿಮಿಟೆಡ್ ನ ಅಧ್ಯಕ್ಷರಾದ ಸಹಕಾರ ರತ್ನ  ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಅವರು ಉಬರಡ್ಕದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು, ಮಾಸ್ ಲಿಮಿಟೆಡ್ ಇವರಿಂದ ಉಬರಡ್ಕ ಮಿತ್ತೂರು, ಪ್ರಾ.ಕೃ.ಪ.ಸ.ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ  ಉದ್ಘಾಟನಾ ನೆರವೇರಿಸಿ ಮಾತನಾಡಿದರು.
“ಮಾಸ್ ಸಂಸ್ಥೆಯೂ ಕಳೆದ 24 ವರ್ಷಗಳಿಂದ ಅಡಿಕೆ ಬೆಳೆಗಾರರ ಹಿತ ಕಾಯುತ್ತಿದ್ದು, ಸಂಸ್ಥೆ ಉತ್ತಮವಾಗಿ ಬೆಳೆಯುತ್ತಿದೆ. ಸಂಘವು ಈ ಬಾರಿ ಸದಸ್ಯರಿಗೆ ಶೇ.6% ಡಿವಿಡೆಂಡ್ ವಿತರಣೆ ಮಾಡಲಾಗಿದೆ.  ಕಾವು ನಿಂತಿಕಲ್ಲು, ಸುಳ್ಯ ಸೇರಿದಂತೆ 12 ನೇ ಖರೀದಿ ಕೇಂದ್ರ ಇಂದು ಉಬರಡ್ಕದಲ್ಲಿ ಆರಂಭಗೊಂಡಿದೆ” ಎಂದರು. “ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕ ಕೂಡ ಆರಂಭಿಸಿದ್ದೇವೆ” ಎಂದರು.

ಈ ಸಂದರ್ಭದಲ್ಲಿ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತರಾದ ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಅಪರೇಟಿವ್‌ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮ್, ಸಹಕಾರ ರತ್ನ ಮಾಸ್ ಲಿ.ಅಧ್ಯಕ್ಷರಾದ ಸೀತಾರಾಮ ರೈ ಹಾಗೂ  ಸಹಕಾರ ರತ್ನ, ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮಂಡೋಡಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ.‌ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಉಬರಡ್ಕ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರರಾದ ಜತ್ತಪ್ಪ ಗೌಡ, ಜೋಡು ದೈವಗಳ ದೈವಸ್ಥಾನ, ಮಿತ್ತೂರು ಇದರ ಅಧ್ಯಕ್ಷರಾದ ವೆಂಕಟ್ರಮಣ ಕೆದಂಬಾಡಿ, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ, ವಲಯ ಮೇಲ್ವಿಚಾರಕ ರತನ್, 
ಮಾಸ್ ಲಿ.ಸಿಇಒ ಟಿ.ಮಹಾಬಲೇಶ್ವರ ಭಟ್ ಸ್ವಾಗತಿಸಿ, ಸಂಘದ ನಿರ್ದೇಶಕ ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.
ಉಬರಡ್ಕಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading