Ad Widget

ಟಿ.ಎಂ.ಶಹೀದ್ ಹಾಗೂ ಕೆ.ಎಂ.ಮುಸ್ತಫಾ  ಮಾಪಳಡ್ಕಕ್ಕೆ ಭೇಟಿ ; ಟಿ.ಎಂ.ಶಹೀದ್ ರವರಿಗೆ ಸನ್ಮಾನ

ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ಹಾಗೂ ಸುಳ್ಯ ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷರಾದ ಕೆ.ಎಂ.ಮುಸ್ತಫಾ ಸುಳ್ಯ ರವರು ಮಾಪಳಡ್ಕ ದರ್ಗಾ ಶರೀಫ್ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಇರುವಂಬಳ್ಳ ಜಮಾಅತ್ ಹಾಗು ಮಾಪಳಡ್ಕ ದರ್ಗಾ ಶರೀಫ್ ಆಡಳಿತ ಸಮಿತಿಯ ವತಿಯಿಂದ  ಟಿ.ಎಂ.ಶಹೀದ್ ರವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಅವರಿಗೆ ಮಾಪಳಡ್ಕದಲ್ಲಿ ಸ್ತ್ರೀಯರ ನಮಾಝ್ ಕೊಠಡಿ, ಸ್ತ್ರೀಯರಿಗೆ ಪ್ರತ್ಯೇಕ ಕ್ಯಾಂಟೀನ್ ಹಾಗೂ ತಡೆಗೋಡೆ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಈ ವಿಷಯದಲ್ಲಿ ನಾನು ಮುತುವರ್ಜಿ ವಹಿಸಿ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಿ ಸರ್ಕಾರದಿಂದ ಸಿಗುವ ಅನುದಾನವನ್ನು ಖಂಡಿತವಾಗಿಯೂ ದೊರಕಿಸಿಕೊಡುತ್ತೇನೆಂಬ ಭರವಸೆಯನ್ನು ಟಿ.ಎಂ‌.ಶಹೀದ್ ರವರು ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುದರ್ರಿಸ್ ಹಾಫಿಳ್ ಅಬ್ದುಲ್ ಸಲಾಂ ನಿಝಾಮಿ, ಜಮಾಅತ್ ಅಧ್ಯಕ್ಷರಾದ ಎ.ಬಿ.ಅಶ್ರಫ್ ಸಅದಿ ಅಡ್ಕ, ಉಪಾಧ್ಯಕ್ಷರಾದ ಧರ್ಮತಣ್ಣಿ ಹಸೈನಾರ್, ಪ್ರಧಾನ ಕಾರ್ಯದರ್ಶಿ ಟಿ.ಎಚ್.ಮುಹಮ್ಮದ್ ಕುಂಞಿ ಹಾಜಿ,ಕಾರ್ಯದರ್ಶಿ ಟಿ.ಎಚ್.ಅಬೂಬಕ್ಕರ್, ಸದಸ್ಯರಾದ ಅಂದುಂಞಿ ಗೋರಡ್ಕ ಹಾಗು ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ಇದರ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ಉಪಸ್ಥಿತಿತರಿದ್ದರು.

ಹಾಗೆಯೇ ಈ ಸಂದರ್ಭದಲ್ಲಿ ಇರುವಂಬಳ್ಳ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರಕಾರದ ಸಂಬಂಧಪಟ್ಟ ಸಚಿವರಿಂದ ಅನುದಾನ ಒದಗಿಸಿಕೊಡುವಂತೆ ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ರವರ ನೇತೃತ್ವದಲ್ಲಿ ಮನವಿಯೊಂದನ್ನು ಸಲ್ಲಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading