Ad Widget

ಸುಬ್ರಹ್ಮಣ್ಯ : ಲಕ್ಷಾಂತರ ರೂಪಾಯಿ ವಂಚಿಸಿದ ಹೋಟೆಲ್ ಮ್ಯಾನೇಜರ್ – ಪ್ರಕರಣ ದಾಖಲು

ಏನೆಕಲ್ಲಿನ ಡಿ.ಇ ರಾಯಲ್ ಮೊಂಟೇನಾ ಹೋಟೇಲ್ ನ ಮ್ಯಾನೇಜರ್ ಲಕ್ಷಾಂತರ ಹಣವನ್ನು ವಂಚಿಸಿರುವ ಬಗ್ಗೆ ಹಾಗೂ ಗ್ರಾಹಕರಿಂದ ಯು.ಪಿ.ಐ.ಡಿ ಮೂಲಕ ಹಣ ವರ್ಗಾವಣೆಯಾಗದೇ ಇದ್ದಾಗ ಅವರಿಂದ ನಗದು ರೂಪದಲ್ಲಿ ಹಣವನ್ನು ಪಡೆದು ಆ ಹಣವನ್ನು ಕಂಪನಿಯ ಖಾತೆಗೆ ಜಮಾ ಮಾಡದೇ ತಾನೆ ಹಣವನ್ನು ವಯಕ್ತಿಕ ವಿಚಾರಗಳಿಗೆ ಬಳಸಿಕೊಂಡಿರುವ ಬಗ್ಗೆ ಆರೋಪಿಸಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದ್ದು, ಕೆಲಸಕ್ಕೆ ಸೇರಿದ ದಿನದಿಂದ ಇಲ್ಲಿಯವರೆಗೆ ಎಲ್ಲಾ ರೀತಿಯ ಹಣದ ವ್ಯವಹಾರವನ್ನು ಇಲ್ಲಿನ ಸಹೋದ್ಯೋಗಿಗಳ ಜೊತೆ ಸೇರಿಕೊಂಡು ಕಂಪನಿಗೆ ಸುಮಾರು 47,67,166 ರೂಪಾಯಿ ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮರದೇವಪುರದ ಅಶೋಕ್ ಕುಮಾರ್.ಎಸ್.ಎನ್ ಎಂಬವರು ದೂರು ನೀಡಿದ್ದು, ಅಶೋಕ್‌ ಅವರು ರಾಯಲ್ ಎಂಟರ್‌ಪ್ರೈಸಸ್‌ ಎಲ್‌.ಎಲ್‌.ಪಿ ಕಂಪನಿಯಲ್ಲಿ ಜನರಲ್ ಮ್ಯಾನೇಜ‌ರ್ ಆಗಿದ್ದು, ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಡಿ.ಇ. ರಾಯಲ್ ಮೋಂಟಾನಾ ಹೋಟೇಲ್ ಮತ್ತು ರೆಸಾರ್ಟ್ ಇವರದ್ದೇ ಸಂಸ್ಥೆಯಾಗಿದ್ದು, ಏನೆಕಲ್ಲಿನ ಹೋಟೇಲ್‌ ಮತ್ತು ರೆಸ್ಟೋರೆಂಟ್ ಗೆ 2024ರ ಫೆಬ್ರವರಿ 28 ರಂದು ಪ್ರೇಮ್‌ಚಂದ್ ಸಿ. ಎಂಬವರನ್ನು ಮ್ಯಾನೇಜರ್ ಆಗಿ ವ್ಯವಹಾರ ಮತ್ತು ನಿರ್ವಹಣೆ ಮಾಡಲು ನೇಮಕ ಮಾಡಲಾಗಿತ್ತು. ಪ್ರೇಮ್‌ಚಂದ್ ಹೋಟೇಲ್ ಮತ್ತು ರೆಸಾರ್ಟ್ ವ್ಯವಹಾರವನ್ನು ಮತ್ತು ನಿರ್ವಹಣೆಯ ಜವಾಬ್ದಾರಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರೂಂ ಬುಕ್ ಮಾಡುವ ಗ್ರಾಹಕರಿಂದ ತನ್ನ ವಯಕ್ತಿಕ ಯು.ಪಿ.ಐ.ಡಿಯನ್ನು ನೀಡಿ ಗ್ರಾಹಕರಿಂದ ಹಣವನ್ನು ಪಡೆದು ಕಂಪನಿಗೆ ಮೋಸ ಮಾಡಿದ್ದು, ಹಾಗೂ ಗ್ರಾಹಕರು ರೂಂ ಬುಕ್ ಮಾಡಲು ಬರುವ ವೇಳೆ ಹೋಟೇಲ್‌ ನ ರಿಸೆಪ್ಪನ್‌ನಲ್ಲಿ ತನದೇ ಯು.ಪಿ.ಐ.ಡಿ ಹೊಂದಿರುವ ಸ್ಕ್ಯಾನರ್‌ನ್ನು ತೋರಿಸಿ ತನ್ನದೇ ಯು.ಪಿ.ಐ.ಡಿ ಸ್ಕ್ಯಾನರ್ ಗೆ ಗ್ರಾಹಕರಿಂದ ಹಣ ಪಡೆದಿರುತ್ತಾರೆ ಎಂದು ಪ್ರಕರಣ ದಾಖಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading