Ad Widget

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯರ ಕಛೇರಿ ಸುಳ್ಯ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2025-26 ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ಡಿ.5 ಮತ್ತು 6 ರಂದು ಜರುಗಲಿದೆ. ಡಿ.5ರ ಕಾರ್ಯಕ್ರಮದಲ್ಲಿ ಅತಿಥಿಗಳ ಆಗಮನ, ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ ಮಾತು, ಪ್ರತಿಭಾ ಕಾರಂಜಿ ಉದ್ಘಾಟನೆ, ಉದ್ಘಾಟಕರ ಮಾತು, ಅತಿಥಿಗಳಿಂದ ಶುಭಹಾರೈಕೆ, ಅಧ್ಯಕ್ಷರ ಭಾಷಣ, ಧನ್ಯವಾದ ಸಮರ್ಪಣೆ ಇರಲಿದೆ.
ಡಿ.5 ರಂದು ಶುಕ್ರವಾರ 1 ರಿಂದ 5 ನೇ ತರಗತಿ ಮಕ್ಕಳಿಗೆ ಕನ್ನಡ ಕಂಠಪಾಠ, ಅರೆಬಿಖ್ ಧಾರ್ಮಿಕ ಪಠಣ, ಛದ್ಮವೇಷ, ಚಿತ್ರಕಲೆ, ಕ್ಲೇ ಮಾಡೆಲಿಂಗ್ ಸ್ಪರ್ಧೆಗಳು ಇವೆ. 5 ರಿಂದ 7 ನೇ ತರಗತಿ ಮಕ್ಕಳಿಗೆ ಕನ್ನಡ ಕಂಠಪಾಠ, ಅರೆಬಿಖ್ ಧಾರ್ಮಿಕ ಪಠಣ, ಮಿಮಿಕ್ರಿ, ಪ್ರಬಂಧ ರಚನೆ, ಚಿತ್ರಕಲೆ, ಕ್ಲೇ ಮಾಡೆಲಿಂಗ್ ಸ್ಪರ್ಧೆ ಇರಲಿದೆ.8 ರಿಂದ 10 ನೇ ತರಗತಿ ಮಕ್ಕಳಿಗೆ ಭರತನಾಟ್ಯ, ಗಝಲ್, ಭಾವಗೀತೆ, ಜಾನಪದಗೀತೆ, ಆಶುಭಾಷಣ, ಕನ್ನಡ ಭಾಷಣ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ತುಳು ಭಾಷಣ, ಅರೆಬಿಖ್ ಧಾರ್ಮಿಕ ಪಠಣ, ಮಿಮಿಕ್ರಿ, ಪ್ರಬಂಧ ರಚನೆ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳು ನಡೆಯಲಿದವೆ.
ಡಿ.6 ರಂದು ಶನಿವಾರ 1 ರಿಂದ 4 ನೇ ತರಗತಿ ಮಕ್ಕಳಿಗೆ ಅಭಿನಯ ಗೀತೆ, ಕಥೆ ಹೇಳುವುದು, ಸಂಸ್ಕೃತ ಧಾರ್ಮಿಕ ಪಠಣ, ಇಂಗ್ಲಿಷ್ ಕಂಠಪಾಠ, ಆಶುಭಾಷಣ, ದೇಶಭಕ್ತಿ ಗೀತೆ, ಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ.
5 ರಿಂದ 7 ನೇ ತರಗತಿ ಮಕ್ಕಳಿಗೆ ಕಥೆ ಹೇಳುವುದು, ಕವನ ಪದ್ಯ ವಾಚನ, ಆಶುಭಾಷಣ, ಅಭಿನಯಗೀತೆ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಕಂಠಪಾಠ, ಇಂಗ್ಲಿಷ್ ಕಂಠಪಾಠ, ಹಿಂದಿ ಕಂಠಪಾಠ, ಭಕ್ತಿಗೀತೆ, ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. 8 ರಿಂದ 10 ನೇ ತರಗತಿ ಮಕ್ಕಳಿಗೆ ಕವ್ವಾಲಿ, ಜಾನಪದ ನೃತ್ಯ, ಕವನ ಪದ್ಯ ವಾಚನ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಭಾಷಣ, ಇಂಗ್ಲಿಷ್ ಭಾಷಣ, ಹಿಂದಿ ಭಾಷಣ ಸ್ಪರ್ಧೆಗಳು ನಡೆಯಲಿವೆ.
ಡಿ.6  ಶನಿವಾರದಂದು ಅಪರಾಹ್ನ 3 ಘಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading