Ad Widget

ಉಬರಡ್ಕ ಮಿತ್ತೂರು : ಡಿ.09ರಂದು ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಬರಡ್ಕ ಮಿತ್ತೂರು ಇವರ ಸಹಯೋಗದಲ್ಲಿ ಸಹಕಾರ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಡಿ.09 ರಂದು ಪೂರ್ವಾಹ್ನ 10:30ಕ್ಕೆ ಉಬರಡ್ಕ ಮಿತ್ತೂರಿನ ಸಿರಿ ಸಹಕಾರಿ ಸೌಧದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಮಂಗಳೂರು ಮಾಸ್ ಲಿಮಿಟೆಡ್ ನ ಅಧ್ಯಕ್ಷರಾದ ಸಹಕಾರ ರತ್ನ ರೋ.ಕೆ.ಸೀತರಾಮ ರೈ ಸವಣೂರು ಇವರು ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರರಾದ ಜತ್ತಪ್ಪ ಗೌಡ, ಮಿತ್ತೂರು ಜೋಡುದೈವಗಳ ದೈವಸ್ಥಾನದ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳಾದ  ರವೀಂದ್ರ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತ ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕಾಧ್ಯಕ್ಷರಾದ ಸಹಕಾರ ರತ್ನ ಪಿ.ಸಿ ಜಯರಾಮ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading