“ಮಕ್ಕಳ ಪಾಲನೆ ಮತ್ತು ಪೋಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖ” : ಉಷಾ ಪ್ರಸಾದ್ ರೈ ; ದೇವರಕಾನ ಅಂಗನವಾಡಿ ಕಾರ್ಯಕರ್ತೆ ನಂದಿನಿ.ಎ ಇವರಿಗೆ ಬೀಳ್ಕೊಡುಗೆ ಸಮಾರಂಭ

ಮಹಿಳಾ ಮತ್ತು ಮಕ್ಕಳ ಇಲಾಖೆ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದ ಐವರ್ನಾಡು ಗ್ರಾಮದ ದೇವರಕಾನ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ನಂದಿನಿ.ಎ ಇವರನ್ನು ದಿನಾಂಕ ಅ.27 ರಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ ಅಭಿನಂದಿಸಿ ಮಾತನಾಡಿದರು....

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ – ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅ.26 ರಂದು ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.ಶಿಬಿರದ ಮೊದಲನೇ ದಿನದ ಧ್ವಜಾರೋಹಣವನ್ನು AOLE(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ...
Ad Widget

ಅಖಿಲ ಕರ್ನಾಟಕ ಗಾಣಿಗ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ಮತ್ತು ಉಪಾಧ್ಯಕ್ಷ ರಂಗರಾಜು ಸುಳ್ಯಕ್ಕೆ ಭೇಟಿ

ಅಖಿಲ ಕರ್ನಾಟಕ ಗಾಣಿಗ ಸಂಘ ಬೆಂಗಳೂರು ಇದರ  ರಾಜ್ಯಾಧ್ಯಕ್ಷರಾದ ರಾಜಶೇಖರ್ ಮತ್ತು ಉಪಾಧ್ಯಕ್ಷರಾದ ರಂಗರಾಜು ಇವರು ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಕಚೇರಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯಇದರ ಅಧ್ಯಕ್ಷರಾದ ವೆಂಕಟ್ರಮಣ ಬೇರ್ಪಡ್ಕ, ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಪೂರ್ವಾಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ, ಜತೆ...

ನ.01 : ನ್ಯಾಯದ ಪರಿಕಲ್ಪನೆ ಪ್ರವಾದಿ ಮುಹಮ್ಮದ್ ಶಿಕ್ಷಣದ ಬೆಳಕಿನಲ್ಲಿ ಎಂಬ ವಿಷಯದ ಕುರಿತು  ವಿಚಾರಗೋಷ್ಠಿ

ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಇವರ ವತಿಯಿಂದ ನ್ಯಾಯದ ಪರಿಕಲ್ಪನೆ ಪ್ರವಾದಿ ಮುಹಮ್ಮದ್(ಸ.) ಶಿಕ್ಷಣದ ಬೆಳಕಿನಲ್ಲಿ ಎಂಬ ವಿಷಯದ ಕುರಿತು ಸಾರ್ವಜನಿಕ ವಿಚಾರಗೋಷ್ಠಿ ಕಾರ್ಯಕ್ರಮವು ನ.1 ರಂದು ಸಂಜೆ ೪ ರಿಂದ ೬ ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಇದರ ರಾಜ್ಯ ಕಾರ್ಯದರ್ಶಿ ಜ|ಮುಹಮ್ಮದ್ ಕುಂಞ...

ಸುಳ್ಯ : ಸೈಂಟ್ ಜೋಸೆಫ್ ಶಾಲೆಗೆ ಸುಳ್ಯ ಹೋಬಳಿ ಮಟ್ಟದ ಸಮಗ್ರ ಪ್ರಶಸ್ತಿ

ಅಕ್ಟೋಬರ್ 24 ಹಾಗೂ 25 ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ   ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಹಾಗೂ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಗಳು ಸುಳ್ಯದ  ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಮಲ್ನಾಡು ವಿದ್ಯಾ ಸಂಸ್ಥೆ ಕೊಡಿಯಾಲಬೈಲ್ ನಲ್ಲಿ ನಡೆದ ಸುಳ್ಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ   17ರ ವಯೋಮಾನದ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಶಾಲಾ ಸಮಗ್ರ...

ಕಂದ್ರಪ್ಪಾಡಿ : ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಅನುದಾನದಲ್ಲಿ  ನಿರ್ಮಾಣವಾಗಲಿರುವ ಶಾಲಾ ಆವರಣ ಗೋಡೆಗೆ ಗುದ್ದಲಿ ಪೂಜೆ

ಕಂದ್ರಪ್ಪಾಡಿ ಸ.ಹಿ‌.ಪ್ರಾ.ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರ ಅನುದಾನದಲ್ಲಿ ರೂ.03 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ಆವರಣ ಗೋಡೆಯ ಗುದ್ದಲಿ ಪೂಜೆ ಕಾರ್ಯಕ್ರಮ ಅ.27ರಂದು ನಡೆಯಿತು.ಈ ಗುದ್ದಲಿ ಪೂಜೆಯನ್ನು ಶಾಲಾ ಎಸ್.ಡಿ.ಎಂ.ಸಿ‌. ಅಧ್ಯಕ್ಷರಾದ ವೀಣಾ ಎಂ.ವಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ನಿತ್ಯಾನಂದ...

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಗೆ “ಅತ್ಯುತ್ತಮ ಲಿಜನ್ ಪ್ರಾಂತೀಯ ಪ್ರಶಸ್ತಿ”

ಸುಬ್ರಹ್ಮಣ್ಯ ಅಕ್ಟೋಬರ್  27 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯ ಎಫ್ ನ ಪ್ರಾಂತೀಯ ಸಮ್ಮೇಳನ ಬೆಂಗಳೂರಿನ ದೇವನಹಳ್ಳಿಯಲ್ಲಿ ರವಿವಾರ ನಡೆದು ಪ್ರಾಂತೀಯ ಎಲ್ಲಾ ಲಿಜನ್ ಗಳಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್  ಅತ್ಯುತ್ತಮ ಲೀಜನ್ ಆಗಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗಿಪ್ರಶಸ್ತಿಯನ್ನು ಪಡೆದಿರುತ್ತದೆ. 2025-26ನೇ ಸಾಲಿನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್...

ಚಪ್ಪಲಿಯೊಳಗೆ ಅವಿತಿದ್ದ ಹಾವು ಕಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

ಚಪ್ಪಲಿಯೊಳಗೆ ಅವಿತಿದ್ದ ಹಾವೊಂದು ಮಹಿಳೆಗೆ ಕಚ್ಚಿದ ಘಟನೆ ಆಲೆಟ್ಟಿಯಲ್ಲಿ ನಡೆದಿದೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ವಿನುತಾ ಎಂಬವರು ಆಸ್ಪತ್ರೆಗೆ ದಾಖಲಾದ ಮಹಿಳೆ. ಅವರು ಮುಂಜಾನೆ ಮನೆಯ ಹೊರ ಭಾಗದಲ್ಲಿ ಇರಿಸಿದ್ದ ಚಪ್ಪಲಿ ಹಾಕಲು ಹೋದಾಗ ಚಪ್ಪಲಿನ ಒಳಗಡೆ ಸೇರಿಕೊಂಡಿದ್ದ ಹಾವು ಇವರ ಕಾಲಿಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ಕೂಡಲೇ  ಅವರನ್ನು  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ...

ಮಂಡೆಕೋಲು: ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗಣೇಶ್ ಮಾವಂಜಿ, ಕಾರ್ಯದರ್ಶಿಯಾಗಿ ಮುರಳೀಧರ ರೈ ಪೇರಾಲು ಆಯ್ಕೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಗ್ರಾಮದ ಅರಿವು ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಮಾವಂಜಿ ಹಾಗೂ ಕಾರ್ಯದರ್ಶಿಗಳಾಗಿ ಮುರಳೀಧರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ ಉಪಾಧ್ಯಕ್ಷರಾಗಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಶಶಿಧರ ಮಾವಜಿ, ಕೋಶಾಧಿಕಾರಿಯಾಗಿ ಭಾರತಿ ಉಗ್ರಾಣಿಮನೆ ಆಯ್ಕೆಯಾದರು....

ರಾಯಚೂರು ಬೆಳಕು ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ಆಯ್ಕೆ

ಬೆಳಕು ಸಾಹಿತ್ಯ, ಶೈಕ್ಷಣಿಕ,ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ಇದರ ಬೆಳಕು ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ರವರು ಆಯ್ಕೆಗೊಂಡಿದ್ದಾರೆ. ಗಾಯಕರಾಗಿರುವ ವಿಜಯಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಉದ್ಯೋಗಿ ಮತ್ತು ಕಸಾಪ ಸುಳ್ಯ ಹೋಬಳಿ ಘಟಕದ ನಿರ್ದೇಶಕರಾಗಿದ್ದಾರೆ.
Loading posts...

All posts loaded

No more posts

error: Content is protected !!