Ad Widget

ನಡುಗಲ್ಲು : ಜವಾಹರ್ ಯುವಕ ಮಂಡಲದ ವತಿಯಿಂದ “ಪಂಚಸಪ್ತತಿ” 75 ದಿನಗಳ ಸ್ವಚ್ಛತಾ ಅಭಿಯಾನಕ್ಕೆ‌ ಚಾಲನೆ

ಸುಳ್ಯ ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಪಂಚಸಪ್ತತಿ-2025” 75 ದಿನಗಳ ಸ್ವಚ್ಚತಾ ಅಭಿಯಾನಕ್ಕೆ ನಡುಗಲ್ಲು ಜವಾಹರ್ ಯುವಕ ಮಂಡಲದ ಸದಸ್ಯರು ಕೈ ಜೋಡಿಸಿದ್ದು, ಅ.10 ರಂದು ನಡುಗಲ್ಲು ಅಂಗನವಾಡಿ ವಠಾರದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಅಂಗನವಾಡಿಯ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.

ಗುತ್ತಿಗಾರು : ನವೆಂಬರ್ ನಲ್ಲಿ ವಳಲಂಬೆಯಲ್ಲಿ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” – ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಹಾಗೂ ಸಂಶೋಧಕರಾದ ಎ.ಕೆ ಹಿಮಕರ

ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಹಾಗೂ ಸಂಶೋಧಕರಾದ ಎ.ಕೆ ಹಿಮಕರ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ.ಅ.09...
Ad Widget

“ಪಂಚಸಪ್ತತಿ ಸ್ವಚ್ಛತಾ ಅಭಿಯಾನ”ಕ್ಕೆ ಕೈಜೋಡಿಸಿದ ವೀರಮಾರುತಿ ಸ್ಪೋಟ್ಸ್ ಕ್ಲಬ್ ಗುತ್ತಿಗಾರು

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ವತಿಯಿಂದ ಆರಂಭಗೊಂಡ "ಪಂಚಸಪ್ತತಿ - 2025" ಸ್ವಚ್ಚತಾ ಅಭಿಯಾನಕ್ಕೆ ಗುತ್ತಿಗಾರಿನ ವೀರ ಮಾರುತಿ ಸ್ಪೋಟ್ಸ್ ಕ್ಲಬ್ 2ನೇ ದಿನವು ಸಾಥ್ ನೀಡಿದೆ. ಯುವಜನ ಸಂಯುಕ್ತ ಮಂಡಳಿಯಿಂದ ತಾಲೂಕಿನಾದ್ಯಂತ 75 ದಿನಗಳ ಸ್ವಚ್ಚತಾ ಅಭಿಯಾನ ನಡೆಯಲಿದೆ. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ ಹಾಗೂ ನಿರ್ದೇಶಕರಾದ...

ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ  ಪಂಬೆತ್ತಾಡಿಯಲ್ಲಿ ಚಾಲನೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಚಾಲನೆಯನ್ನು ಅ.10 ರಂದು ಸಂಜೆ 6:00ಕ್ಕೆ ಕರಿಕ್ಕಳ ಭಾಗದಲ್ಲಿರುವ ಬಸ್ಸು ತಂಗುದಾಣ ಹಾಗೂ ರಸ್ತೆಬದಿ ಸ್ವಚ್ಛತೆ ಮಾಡುವ ಮೂಲಕ ನೆರವೇರಿತು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಶ್ರೀ ಪವನ್...

ಗುತ್ತಿಗಾರು : ಇಂಪಾರ್ಟೆಂಟ್ ಎಫ್.ಸಿ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಇಂಪಾರ್ಟೆಂಟ್ ಎಫ್‌ಸಿ(ರಿ.) ಗುತ್ತಿಗಾರು ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ” ಕ್ಕೆ ಅ.10 ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಐ.ಎಫ್‌.ಸಿ ಪ್ರಧಾನ ಕಾರ್ಯದರ್ಶಿ ಆಶ್ಲೇಷ್ ಕೆಡಿ ಅವರು ಉದ್ಘಾಟಿಸಿದರು.ಐ.ಎಫ್‌‌.ಸಿ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರು ಕೌಶಿಕ್ ಶ್ಯಾಮ್ ಮತ್ತು ಶ್ರಿಶರಣ್ ಮೊಗ್ರ, ಮೋನಿಶ್ ಬಾಕಿಲ, ಕಾರ್ಯದರ್ಶಿಗಳು ಕಿರಣ್ ವಳಲಂಬೆ, ನಿರ್ದೇಶಕರು ಅಮಿತ್ ನಾಯಕ್...

ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ದಿನಾಂಕ ಅ.10 ಶುಕ್ರವಾರದಂದು ಸಂಜೆ 5.30ಕ್ಕೆ ಚಾಲನೆಗೊಂಡಿತು.ಶೆಟ್ಟಿಮಜಲು ಕ್ರೀಡಾಂಗಣದ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಗೆಳೆಯರ ಬಳಗದದ ಎಲ್ಲಾ ಸದಸ್ಯರು, ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು....

ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಸಚಿವರಿಗೆ ಮನವಿ

ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅರಂತೋಡು-ತೊಡಿಕಾನ - ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ ನೀಡಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,  ಜಿ.ಪಂ.ಮಾಜಿ...

ನಾಗಪಟ್ಟಣ ಬಳಿ ಅಪಘಾತ – ಬೈಕ್ ಸವಾರ ಮೃತ್ಯು

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616 ಸುಳ್ಯದ ನಾಗಪಟ್ಟಣ ಬಳಿ ದೋಸ್ತ್ ವಾಹನ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ...

ನೆಟ್ಟಾರು : “ಪಂಚಸಪ್ತತಿ” 75 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ  ಮತ್ತು ಅಕ್ಷಯ ಯುವಕ ಮಂಡಲ ನೆಟ್ಟಾರು ಆಶ್ರಯದಲ್ಲಿ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025  ಕಾರ್ಯಕ್ರಮಕ್ಕೆ ಅ.10ರಂದು ಬೆಳ್ಳಾರೆ ನೆಟ್ಟಾರು ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಅಕ್ಷಯ ಯುವಕ ಮಂಡಲ ಸ್ಥಾಪಕಾಧ್ಯಕ್ಷ ದೇವದಾಸ್  ನೆಟ್ಟಾರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಕ್ಷಯ ಯುವಕ ಮಂಡಲ ಅಧ್ಯಕ್ಷರಾದ...

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ  ಹುದ್ದೆಗೆ ಅನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳಲ್ಲಿ ತೆರವಾಗಿರುವ ಒಟ್ಟು 7 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಅಂಗನವಾಡಿ ಸಹಾಯಕಿಯರ  ಹುದ್ದೆಗೆ ಅನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 20.10.2025ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ 75 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಅವುಗಳು ಪರಿಶೀಲನೆಗೆ ಲಭ್ಯವಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 3 ಹಂತಗಳನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರ...
Loading posts...

All posts loaded

No more posts

error: Content is protected !!