Ad Widget

ಮಡಪ್ಪಾಡಿ ಯುವಕ ಮಂಡಲದ ವತಿಯಿಂದ “ಪಂಚಸಪ್ತತಿ” ಸ್ವಚ್ಛತಾ ಅಭಿಯಾನ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಇದರ ಎರಡನೇಯ ಕಾರ್ಯಕ್ರಮ ದಿನಾಂಕ ಅ.12 ಆದಿತ್ಯವಾರದಂದು ಬೆಳಿಗ್ಗೆ 7.30ಕ್ಕೆ ನಡೆಯಿತು.ಮಡಪ್ಪಾಡಿ ಯುವಕ ಮಂಡಲದ ಶೌಚಾಲಯ ಹಾಗೂ ಸ್ನಾನಗೃಹ ಹಾಗೂ ಇದರ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ...

ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ಮಾಹಿತಿ ಕಾರ್ಯಕ್ರಮ ; ನೇರ ಪ್ರಸಾರ ವೀಕ್ಷಣೆ

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ ಇವರುಗಳ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ನೇರ ಪ್ರಸಾರ ವೀಕ್ಷಣೆ ಅ.11 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ಟಿ.ಜೆ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಕೃಷಿ...
Ad Widget

ದೇವ ಗೆಳೆಯರ ಬಳಗದ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮಕ್ಕೆ ದೇವ ಗೆಳೆಯರ ಬಳಗದ ವತಿಯಿಂದ ಚಾಲನೆ ನೀಡಲಾಯಿತು. ದೇವ ಶಾಲೆ, ಅಂಗನವಾಡಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೋಂಡಿದ್ದರು.

ಬೆಳ್ಳಾರೆ : ಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ವಿವಿಧ ವೇಷಭೂಷಣ ಧರಿಸಿ ಧನ ಸಂಗ್ರಹ – ಹಸ್ತಾಂತರ

ದುರ್ಗಾ ನಾಸಿಕ್ ಬೀಟ್ಸ್ ಬೆಳ್ಳಾರೆ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ, ಸೌರವ್ ಬ್ಯಾಡ್ಮಿಂಟನ್ ಕ್ಲಬ್ ಬೆಳ್ಳಾರೆ ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ ಇದರ ಸಹಯೋಗದೊಂದಿಗೆ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಇವರು ಅಪ್ಲಾಸ್ಟಿಕ್ ಅನಾಮಿಯ ಎಂಬ ಕಾಯಿಲೆಯಿಂದ ಬಳಲುತಿದ್ದು ವ್ಯೆದ್ಯರು ಸುಮಾರು 20 ರಿಂದ 25 ಲಕ್ಷ ಚಿಕಿತ್ಸ ವೆಚ್ಚ ತಗುಲುವುದು ಎಂದು ತಿಳಿಸಿದ್ದರು.....

ಕಲ್ಲುಗುಂಡಿ : ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ

ಸಂಪಾಜೆ ಗ್ರಾಮ ಪಂಚಾಯತ್(ದ.ಕ), ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್(ರಿ.) ಕಲ್ಲುಗುಂಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ.) ಜಂಟಿ ಆಶ್ರಯದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಸನ್ಮಾನ ಅ.11 ಗ್ರಾಮ ಪಂಚಾಯತ್ ಸಭಾಂಗಣ ಕಲ್ಲುಗುಂಡಿಯಲ್ಲಿ ನಡೆಯಿತುಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ವಹಿಸಿದರು,  ಉಧ್ಘಾಟನೆಯನ್ನು ಗ್ರಾಮ ಪಂಚಾಯತ್...

ಜಿ ಎಲ್ ಆಚಾರ್ಯ ವತಿಯಿಂದ ಗ್ರಾಹಕರಿಗೆ “ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ” ವಿಶೇಷ ಯೋಜನೆ

ಸುಪ್ರಸಿದ್ಧ ಜಿಎಲ್ ಆಚಾರ್ಯ ಜುವೆಲರ್ಸ್ ವತಿಯಿಂದ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದು, ಜಿಎಲ್ ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ ಯೋಜನೆ ರೂಪಿಸಿದೆ. ದಿನನಿತ್ಯದ ಸಣ್ಣಪುಟ್ಟ ಕಾರ್ಯಗಳಿಗೆ ಖರ್ಚು ಮಾಡುವ ಸಣ್ಣ ಮೊತ್ತವನ್ನು ಪರಿಶುದ್ಧ ಚಿನ್ನಾಭರಣವಾಗಿ ಪರಿವರ್ತಿಸಲು ಜಿ.ಎಲ್. ಸಂಸ್ಥೆ ಅವಕಾಶ ಒದಗಿಸಿದೆ.  "ಜಿಎಲ್ ಸ್ವರ್ಣ ನಿಧಿ" ಸ್ಕೀಮ್ ನಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನಗಳು ದೊರೆಯಲಿದೆ....

ಸೈಂಟ್ ಜೋಸೆಫ್ ಶಾಲಾ ಯೋಗ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಅಕ್ಟೋಬರ್ 9 & 10ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾನೂರು ಕಾರ್ಕಳದ  ಆಶ್ರಯದಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್ 7ನೇ, ಆರ್ಟಿಸ್ಟಿಕ್ ಡಬಲ್ಸ್...

ಮೋನಪ್ಪ ಗೌಡ ಹುಲಿಮನೆ ಅವರಿಗೆ “ಸಮಗ್ರ ಕೃಷಿ ಪ್ರಶಸ್ತಿ”

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಮೋನಪ್ಪ ಗೌಡ ಹುಲಿಮನೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ವತಿಯಿಂದ “ಸಮಗ್ರ ಕೃಷಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೆಂಜಾಳ : “ಪಂಚಸಪ್ತತಿ-2025” 75  ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ರಾಜ್ಯ ಪ್ರಶಸ್ತಿ ಪುರಸ್ಕೃತ  ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ನಡೆಸಲ್ಪಡುವ "ಪಂಚಸಪ್ತತಿ 2025" ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕಮಂಡಲ(ರಿ.)ರೆಂಜಾಳ ಇದರ ವತಿಯಿಂದ ರೆಂಜಾಳ ದೇವಳದ ವಠಾರದಲ್ಲಿ ಅ.10 ರಂದು  ಚಾಲನೆ ನೀಡಲಾಯಿತು.ಶ್ರೀ ದೇವಳದ ಅನ್ನಪೂರ್ಣ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ...

ವಾಲ್ತಾಜೆ : “ಪಂಚಸಪ್ತತಿ-2025” ಸ್ವಚ್ಛತಾ ಅಭಿಯಾನಕ್ಕೆ ಯುವ ಸೇವಾ ಮತ್ತು ಕ್ರೀಡಾ ಸಂಘದಿಂದ ಚಾಲನೆ

"ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ಯುವ ಸೇವಾ ಮತ್ತು ಕ್ರೀಡಾ ಸಂಘ(ರಿ.) ವಾಲ್ತಾಜೆಯ ಯುವಕರ ತಂಡವು  ಕಂದ್ರಪ್ಪಾಡಿಯ ಮುಳಿಯಡ್ಕದಿಂದ ವಾಲ್ತಾಜೆಯ ಮಲೆಭೂತ ಚಾವಡಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರಾದ ವಿಜೇಶ್ ಹಿರಿಯಡ್ಕ ಹಾಗೂ ಯುವ ಸೇವಾ ಮತ್ತು ಕ್ರೀಡಾ ಸಂಘದ ಗೌರವ ಸಲಹೆಗಾರರಾದ ಸೋಮಶೇಖರ ಹೆಡ್ಡನಮನೆ...
Loading posts...

All posts loaded

No more posts

error: Content is protected !!