Ad Widget

ಹರಿಹರ ಪಳ್ಳತ್ತಡ್ಕ : ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ, ಗ್ರಾಮ ಪಂಚಾಯತ್ ಹರಿಹರ ಪಳ್ಳತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಹಾಗೂ ಅಶ್ವಿನ್ ಆಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಯೋಗಕ್ಷೇಮ ಸಂಕೀರ್ಣ ಕಡಬ ಇವುಗಳ ಸಹಯೋಗದೊಂದಿಗೆ ಅ.12 ರಂದು ಹರಿಹರ ಪಳ್ಳತ್ತಡ್ಕದ ಶ್ರೀ...

ಮಡಿಕೇರಿ : ಉದ್ಯಮಿ ಹೆಚ್.ಎಂ.ನಂದಕುಮಾರ್ ಮಾಲಕತ್ವದ ಲಾಲಿ ಅಪ್ಪರೆಲ್ಸ್(ಗಾರ್ಮೆಂಟ್ಸ್) ಉದ್ಘಾಟನೆ – “ಕೌಶಲ್ಯ ತರಬೇತಿ ಮತ್ತು ಸಣ್ಣ ಉದ್ದಿಮೆಗಳಿಗೆ ಸರಕಾರದಿಂದ ಪ್ರೋತ್ಸಾಹ” : ಸಚಿವ ಹೆಚ್.ಸಿ ಮಹದೇವಪ್ಪ

ಮಡಿಕೇರಿಯ ಉದ್ಯಮಿ ಹೆಚ್.ಎಂ ನಂದಕುಮಾರ್ ಮಾಲಕತ್ವದ ಲಾಲಿ ಅಪ್ಪರೆಲ್ಸ್(ಗಾರ್ಮೆಂಟ್ಸ್) ಉದ್ಯಮ ಮಡಿಕೇರಿಯ ಚೈನ್ ಗೇಟ್ ಬಳಿ ಉದ್ಘಾಟನೆ ಗೊಂಡಿತು. ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕ ಸರಕಾರ ಎಸ್.ಇ.ಪಿ, ಟಿ.ಎಸ್.ಪಿ ಅನುದಾನದಲ್ಲಿ ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಿದೆ....
Ad Widget

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯದ ಪ್ರಥಮ ತ್ರೈಮಾಸಿಕ ಸಭೆ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ಇದರ ಪ್ರಥಮ ತ್ರೈಮಾಸಿಕ ಸಭೆಯು 12.10.2025ರಂದು ಸಿ.ಎ.ಬ್ಯಾಂಕ್ ಐಸಿರಿ ಸಭಾಂಗಣ ಮರ್ಕಂಜದಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.ಕಾರ್ಯಕ್ರಮವನ್ನು ನಿವೃತ  ಪೊಲೀಸ್ ಅಧಿಕಾರಿ ರಾಜಗೋಪಾಲ್ ಉಳುವಾರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಂಪಾಜೆ ವಲಯ ಮೇಲ್ವಿಚಾರಕರಾದ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟಕರು ಮಾತನಾಡಿ ಭಜನಾ ಪರಿಷತ್ ನ ಕಾರ್ಯಕ್ರಮದ...

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ‌‌ ಸಂಘದ 2025-2028ನೇ ಸಾಲಿನ ಆಡಳಿತ ಸಮಿತಿ ಸದಸ್ಯರ ಪ್ರಥಮ ಸಭೆ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ್ ರೈಯವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಹೋಟೆಲ್ ರಸಪಾಕ ಗ್ರ್ಯಾಂಡ್ ನಲ್ಲಿ ಜರುಗಿತು.2025-2028ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.ಗೌರವಾಧ್ಯಕ್ಷರಾಗಿ ಪಿ.ಬಿ.ಸುಧಾಕರ್ ರೈ ನೆಟ್ ಕಾಂ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ ಗ್ರೂಪ್ಸ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್...

ಗುತ್ತಿಗಾರು : ಪಂಚಸಪ್ತತಿ ಕಾರ್ಯಕ್ರಮದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನಿಂದ ನಿರಂತರ ಸ್ವಚ್ಚತೆ

ಯುವಜನ ಸಂಯುಕ್ತ ಮಂಡಳಿಯ 75 ದಿನಗಳ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ನಿರಂತರ ಕೈಜೋಡಿಸುತ್ತಿದೆ.‌ 3ನೇ ದಿನದ ಸ್ವಚ್ಚತಾ ಕಾರ್ಯಕ್ರಮ ಗುತ್ತಿಗಾರು ಪೇಟೆಯಲ್ಲಿ ಮತ್ತು 4 ನೇ ಸ್ವಚ್ಚತಾ ಕಾರ್ಯಕ್ರಮ ವಳಲಂಬೆ ಬಸ್ಸು ತಂಗುದಾಣದ ಪರಿಸರ ಶುಚಿಗೊಳಿಸಲಾಯಿತು.

ಚಿಗುರು ಗೆಳೆಯರ ಬಳಗ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಎರಡನೇ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ ಇದರ ವತಿಯಿಂದ "ಪಂಚಸಪ್ತತಿ-2025" 75 ದಿನಗಳ ಸ್ವಚ್ಛತಾ ಅಭಿಯಾನದ 2ನೇ ಕಾರ್ಯಕ್ರಮ ಪಂಜ ಹೋಬಳಿ ಮಟ್ಟದ ಕ್ರೀಡಾಕೂಟ ಸಲುವಾಗಿ ಪದವಿಪೂರ್ವ ಕಾಲೇಜು ಪಂಜದ ಕೋಟಿಚೆನ್ನಯ ಕ್ರೀಡಾಂಗಣದಲ್ಲಿ ಚಿಗುರು ಗೆಳೆಯಯ ಬಳಗ ಇದರ ಸದಸ್ಯರಿಂದ ಕ್ರೀಡಾಂಗಣ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಸುಳ್ಯ ಎನ್.ಎಂ.ಪಿ.ಯು.ಸಿ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಶ್ರೀ ಶಾರದಾಂಬ ವೇದಿಕೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಪೂ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ(ರಿ.)ಪ್ರಧಾನ ಕಾರ್ಯದರ್ಶಿ ಆರ್ಕಿ ಟೆಕ್ಟ್ ಅಕ್ಷಯ್ ಕೆ.ಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾಂಬ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು

ಸುಬ್ರಹ್ಮಣ್ಯ ಅಕ್ಟೋಬರ್ 12 : ದಕ್ಷಿಣ ಭಾರತದ ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಸಾಲು ಸಾಲಾಗಿ ಕ್ಷೇತ್ರಕ್ಕೆ ಬರುವ ಭಕ್ತರ ದಂಡೆ ಕಂಡು ಬಂತು. ರಾಜ್ಯದಲ್ಲಿ ಜಾತಿ ಸಮೀಕ್ಷೆ ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿದ ಕಾರಣ ಹಾಗೂ ಎರಡನೇ ಶನಿವಾರ ನಿನ್ನೆ ಆದ್ದರಿಂದ ಇಂದು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು...

ಹರಿಹರ ಪಳ್ಳತ್ತಡ್ಕ : “ಪಂಚಸಪ್ತತಿ-2025” 75 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಸಚಿನ್ ಕ್ರೀಡಾ ಸಂಘ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ(ರಿ.) ಇವುಗಳ ಸಂಯುಕ್ತಾಶ್ರಯದಲ್ಲಿ “ಪಂಚಸಪ್ತತಿ-2025” ಅಭಿಯಾನದ ಅಡಿಯಲ್ಲಿ ಮುಂದಿನ 75 ದಿನಗಳ ಕಾಲ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿದ್ದು, ಈ ಅಭಿಯಾನಕ್ಕೆ ಹರಿಹರ ಪಳ್ಳತ್ತಡ್ಕದ ಸಚಿನ್ ಕ್ರೀಡಾ ಸಂಘವು ಕೈ ಜೋಡಿಸಿದ್ದು, ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.(ವರದಿ :...

ನಡುಗಲ್ಲು : ಶ್ರೀ ದುರ್ಗಾ ಯುವತಿ ಮಂಡಲದ ಅಶ್ರಯದಲ್ಲಿ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ”

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ “ಪಂಚಸಪ್ತತಿ-2025” ಸ್ವಚ್ಛತಾ ಕಾರ್ಯಕ್ರಮಕ್ಕೆ ನಡುಗಲ್ಲು ಶ್ರೀ ದುರ್ಗಾ ಯುವತಿ ಮಂಡಲದ ವತಿಯಿಂದ ಚಾಲನೆ ನೀಡಲಾಯಿತು.ಅ.10 ರಂದು ನಡುಗಲ್ಲು ಅಂಗನವಾಡಿ ವಠಾರದಲ್ಲಿ ಅಧಿಕೃತ ಚಾಲನೆ ನೀಡಿ, ಅಂಗನವಾಡಿಯ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಡಿದ್ದರು.
Loading posts...

All posts loaded

No more posts

error: Content is protected !!