Ad Widget

ಡಾ.ರವಿ ಕಕ್ಕೆಪದವು ಅವರಿಗೆ ಸೀನಿಯರ್ ಚೇಂಬರ್ ನಿಕಟಪೂರ್ವ ರಾಷ್ಟ್ರಾಧ್ಯಕ್ಷರ ಎಕ್ಸಲೆನ್ಸ್ ಅವಾರ್ಡ್

ಸುಬ್ರಹ್ಮಣ್ಯ ಅಕ್ಟೋಬರ್ 30 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲಿಜನ್ ನ ನಿಕಟ ಪೂರ್ವ  ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು ಅವರಿಗೆ ನಿಕಟ ಪೂರ್ವ ರಾಷ್ಟ್ರಾಧ್ಯಕ್ಷ ಚಿತ್ರ ಕುಮಾರ್ ಅವರು ಸುಬ್ರಹ್ಮಣ್ಯದಲ್ಲಿ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಿದರು.
ಡಾ.ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಡವರಿಗೆ ಹಾಗೂ ಸೂರು  ಇಲ್ಲದವರಿಗೆ ಮನೆ ಶೌಚಾಲಯ ನಿರ್ಮಿಸಿ ಕೊಟ್ಟವರು. ಅಲ್ಲದೆ ಬಡಬಗ್ಗರಿಗೆ ಅಕ್ಕಿ, ವಸ್ತ್ರದಾನ, ಇನ್ನಿತರ ದವಸ ಧಾನ್ಯಗಳನ್ನ ದಾನವಾಗಿ ನೀಡುತ್ತಾ ಬಂದವರು. ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರದಲ್ಲಿ ಪ್ರತಿ ರವಿವಾರ ಸ್ವಚ್ಛತಾ ಕಾರ್ಯಕ್ರಮವನ್ನು ತನ್ನೆಲ್ಲ ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ನ ಸದಸ್ಯರ ಒಳಗೋಡಿ ನಿರಂತರವಾಗಿ ಮಾಡುತ್ತಾ ಬಂದದ್ದನ್ನು ಪರಿಗಣಿಸಿ  ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ಅಧ್ಯಕ್ಷ ವೆಂಕಟೇಶ್ ಎಚ್‌.ಎಲ್ ಕಾರ್ಯದರ್ಶಿ ಗೋಪಾಲ ಎಣ್ಣೆಮಜಲು ಕೋಶಾಧಿಕಾರಿ ಮೋನಪ್ಪ.ಡಿ ನಿರ್ದೇಶಕರುಗಳಾದ ಪ್ರಕಾಶ್ ಕಟ್ಟೆಮನೆ, ಚಂದ್ರಶೇಖರ ನಾಯರ್, ಮಾಧವ ದೇವರಗದ್ದೆ, ಅಶೋಕ್ ಕುಮಾರ್ ಮೂಲೆಮಜಲು, ದೀಪಕ್ ನಂಬಿಯಾರ್ ಮುಂತಾದವರು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading