Ad Widget

ಗುತ್ತಿಗಾರು : ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 20ನೇ ದಿನದ “ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ”

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇವರ ಮಹತ್ವಾಕಾಂಕ್ಷಿ ಯೋಚನೆ ಹಾಗೂ ಯೋಜನೆಗಳಲ್ಲಿ ಒಂದಾದ “ಪಂಚಸಪ್ತತಿ – 2025” 75 ದಿವಸಗಳ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ಇವರು ಬರೋಬ್ಬರಿ 20ನೇ ದಿವಸ ಪೂ.ಗಂ.7:00ರಿಂದ‌ 9:00ರವರೆಗೆ ಗುತ್ತಿಗಾರು ಪಿ.ಎಂ.ಶ್ರೀ.ಸ.ಹಿ.ಪ್ರಾ.ಶಾಲೆಯ ಆವರಣವದ ಗಿಡಗಂಟಿಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಚಗೊಳಿಸಲಾಯಿತು.‌
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿಯವರು ಸ್ವಚ್ಚತಾ ಕಾರ್ಯದಲ್ಲಿ 2ನೇ ದಿವಸವೂ ಕೂಡ ತನ್ನನ್ನು ತಾನು ತೊಡಗಿಸಿಕೊಂಡು, ಇತರ ಶಾಲೆಗಳಿಗೆ ಮಾದರಿಯಾಗಿರುವುದು ಶ್ಲಾಘನೀಯ. ಅಲ್ಲದೇ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.
ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ 5 ಕಳೆಕೊಚ್ಚುವ ಯಂತ್ರದೊಂದಿಗೆ ಸ್ಪೋರ್ಟ್ಸ್ ಕ್ಲಬ್ಬಿನ 10 ಮಂದಿ ಸದಸ್ಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading