Ad Widget

ನ.05 : ನಿಡ್ವಾಳ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ – ಕೋಡಿಮಠದ ಶ್ರೀಗಳ ಉಪಸ್ಥಿತಿ – ಮುಂದಿನ ಎಪ್ರಿಲ್ ನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಕ್ಕೆ ತೀರ್ಮಾನ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್  05 ಬುಧವಾರದಂದು ಬೆಳಗ್ಗೆ 8:30ರಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದೆ.
ಋಷಿ ಪರಂಪರೆಯ ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಲೋಕಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಈ ಮಹಾಯಾಗ ನಡೆಯಲಿದೆ.
ಪರಮಪೂಜ್ಯ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಕೋಡಿಮಠ ಮಹಾಸಂಸ್ಥಾನ ಅರಸೀಕೆರೆ ಇವರ ದಿವ್ಯ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ। ಮೂ। ಕೆಮ್ಮಿಂಜೆ ನಾಗೇಶ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇ। ಮೂ। ಅಕ್ಷಯ ಭಟ್ ಬರ್ಲಾಯಬೆಟ್ಟು ಇವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ಜರಗಲಿದೆ ಎಂದು ಮಹಾಯಾಗ ಸಮಿತಿಯವರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading