Ad Widget

ಪಂಜ : ನ.02 ರಂದು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಬೃಹತ್ ರಕ್ತದಾನ ಶಿಬಿರ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇವುಗಳ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇವುಗಳ ಸಹಯೋಗದೊಂದಿಗೆ ಬಿ.ಎಂ.ಎಸ್ ಆಟೋ ಚಾಲಕ-ಮ್ಹಾಲಕರ ಸಂಘ ಪಂಜ, ಜೆ.ಸಿ.ಐ ಪಂಜ ಪಂಚಶ್ರೀ, ಯುವ ತೇಜಸ್ಸು ಟ್ರಸ್ಟ್, ವಿಕ್ರಮ ಯುವಕ ಮಂಡಲ ಬಳ್ಪ(ರಿ.), ಮಿತ್ರ ಮಂಡಲ(ರಿ.) ನಾಗತೀರ್ಥ, ಉಳ್ಳಾಕುಲು ಕಲಾರಂಗ(ರಿ.) ಪಲ್ಲೋಡಿ, ಲಯನ್ಸ್ ಕ್ಲಬ್ ಪಂಜ, ಸದಾಸಿದ್ಧಿ ಮಿತ್ರ ಬಳಗ(ರಿ.) ಬೀದಿಗುಡ್ಡೆ, ಯುವಶಕ್ತಿ ಗೆಳೆಯರ ಬಳಗ ಪೊಳೆಂಜ(ರಿ.), ಜೈ ಕರ್ನಾಟಕ ಯುವಕ ಮಂಡಲ(ರಿ.) ಐವತ್ತೊಕ್ಲು, ಶಿವಾಜಿ ಯುವಕ ಮಂಡಲ(ರಿ.) ಕೂತ್ಕುಂಜ, ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ, ವನಿತಾ ಸಮಾಜ(ರಿ.) ಪಂಜ, ಪಂಚಶ್ರೀ ಯುವಕ ಮಂಡಲ(ರಿ.) ಪಂಬೆತ್ತಾಡಿ, ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್(ರಿ.) ಬೀದಿಗುಡ್ಡೆ, ಶಿವ ಪ್ರೆಂಡ್ಸ್(ರಿ.) ಪಂಜ, ದುರ್ಗಾ ಸೇವಾ ಸಂಘ ಕೇನ್ಯ ಹಾಗೂ ಕಲರ್ ಈಗಲ್ಸ್ ಪಂಜ ಇವುಗಳ ಸಹಕಾರದೊಂದಿಗೆ ನವೆಂಬರ್ 02ನೇ ಭಾನುವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಬೃಹತ್ ರಕ್ತದಾನ ಶಿಬಿರ”ವು ನಡೆಯಲಿದ್ದು, ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕು. ಹಾಗೂ ರಕ್ತದಾನದ ಮುಖಾಂತರ ಜೀವ ಉಳಿಸುವಂತಹ ಮಹಾತ್ಕಾರ್ಯದಲ್ಲಿ 18 ವರ್ಷದಿಂದ 65 ವರ್ಷದವರೆಗಿನ ಆರೋಗ್ಯವಂತರು ಕೈಜೋಡಿಸಬಹುದು. ಹಾಗೂ ರಕ್ತದಾನ ಮಾಡಲು ಇಚ್ಛಿಸುವವರು ನೋಂದಣಿ ಮತ್ತು ಮಾಹಿತಿಗಾಗಿ ಜನಾರ್ಧನ ನಾಗತೀರ್ಥ 8861074919 ಮತ್ತು ಸುಜಿತ್ ಪಂಬೆತ್ತಾಡಿ 9380057725 ಇವರನ್ನು ಸಂಪರ್ಕಿಸಬಹುದು ಎಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading