Ad Widget

ಮಂಡೆಕೋಲು: ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗಣೇಶ್ ಮಾವಂಜಿ, ಕಾರ್ಯದರ್ಶಿಯಾಗಿ ಮುರಳೀಧರ ರೈ ಪೇರಾಲು ಆಯ್ಕೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಗ್ರಾಮದ ಅರಿವು ಕೇಂದ್ರದಲ್ಲಿ ನಡೆಯಿತು.

. . . . . . . . .

ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಮಾವಂಜಿ ಹಾಗೂ ಕಾರ್ಯದರ್ಶಿಗಳಾಗಿ ಮುರಳೀಧರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ ಉಪಾಧ್ಯಕ್ಷರಾಗಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಶಶಿಧರ ಮಾವಜಿ, ಕೋಶಾಧಿಕಾರಿಯಾಗಿ ಭಾರತಿ ಉಗ್ರಾಣಿಮನೆ ಆಯ್ಕೆಯಾದರು. ಸಂಘದ ನಿರ್ದೇಶಕರುಗಳಾಗಿ ಉಮೇಶ್ ಮೇಲ್ಮನೆ, ಮುರಳೀಧರ ಉಗ್ರಾಣಿಮನೆ, ಭವ್ಯ ಉಗ್ರಾಣಿಮನೆ, ದಿನಕರ ಪಡ್ಪು, ಸವಿತಾ ಯದುಗಿರಿ, ಭವಾನಿಶಂಕರ್ ಕಲ್ಲಡ್ಕ, ಸರಸ್ವತಿ ಕಣೆಮರಡ್ಕ, ತಿರುಮಲೇಶ್ವರಿ ಪಾತಿಕಲ್ಲು ಹಾಗೂ ಯಶೋಧಾ ಪಂಜಿಕಲ್ಲು ಆಯ್ಕೆಯಾದರು.

. . . . . . .

ರಬ್ಬರ್ ಬೋರ್ಡ್ ನ ತರಬೇತುದಾರ ಹಾಗೂ ಮಾಹಿತಿದಾರ ಸತ್ಯಶಾಂತಿ ತ್ಯಾಗಮೂರ್ತಿ ನೂತನವಾಗಿ ಆಯ್ಕೆಯಾದ ಸಂಘದ ಪದಾಧಿಕಾರಿಗಳಿಗಳನ್ನು ಅಭಿನಂದಿಸಿದರಲ್ಲದೆ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಅರಿವು ಕೇಂದ್ರದ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಸ್ವಾಗತಿಸಿ, ವಂದಿಸಿ,ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading