Ad Widget

ಕಂದ್ರಪ್ಪಾಡಿ : ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಅನುದಾನದಲ್ಲಿ  ನಿರ್ಮಾಣವಾಗಲಿರುವ ಶಾಲಾ ಆವರಣ ಗೋಡೆಗೆ ಗುದ್ದಲಿ ಪೂಜೆ

ಕಂದ್ರಪ್ಪಾಡಿ ಸ.ಹಿ‌.ಪ್ರಾ.ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರ ಅನುದಾನದಲ್ಲಿ ರೂ.03 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ಆವರಣ ಗೋಡೆಯ ಗುದ್ದಲಿ ಪೂಜೆ ಕಾರ್ಯಕ್ರಮ ಅ.27ರಂದು ನಡೆಯಿತು.
ಈ ಗುದ್ದಲಿ ಪೂಜೆಯನ್ನು ಶಾಲಾ ಎಸ್.ಡಿ.ಎಂ.ಸಿ‌. ಅಧ್ಯಕ್ಷರಾದ ವೀಣಾ ಎಂ.ವಿ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಕೇಶ್ ರಾಜ್ ಹಿರಿಯಡ್ಕ, ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ಕೆ ಎಸ್ ಮತ್ತು ಹಿರಿಯ ವಿದ್ಯಾರ್ಥಿಗಳಾದ ಕುಶಾಲಪ್ಪ ಮಾಸ್ತರ್ ಕಂದ್ರಪ್ಪಾಡಿ, ಕಿಶೋರ್ ಕುಮಾರ್ ಅಂಬೆಕಲ್ಲು, ಲಿಂಗಪ್ಪಗೌಡ ಚಿತ್ತಡ್ಕ, ಪ್ರಕಾಶ್ ಮುಂಡೋಡಿ, ಚಂದ್ರಶೇಖರ ಕಂದ್ರಪ್ಪಾಡಿ, ಹರೀಶ್ ಆಚರಿಕಾನ, ವಿಜೇಶ್ ಹಿರಿಯಡ್ಕ, ಪ್ರೀತಮ್ ಮುಂಡೋಡಿ, ವಾಣಿ ಎಂ ವಿ ಮತ್ತು ಗುತ್ತಿಗೆದಾರರದ ಉದಯಕುಮಾರ್ ಮುಂಡೋಡಿ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಮಕ್ಕಳು, ಅಧ್ಯಾಪಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

. . . . . . . . .

ಕಂದ್ರಪ್ಪಾಡಿ ಶಾಲೆಯ ಶತಮಾನೋತ್ಸವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಭೋಜೇಗೋಡರಿಗೆ  ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading