Ad Widget

ಮಂಡೆಕೋಲು : ಮಹಿಳೆಯರ ಆರೋಗ್ಯ, ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಗಾರ

ಯುವಜನ ಸಂಯುಕ್ತ ಮಂಡಳಿ ಸುಳ್ಯ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು, ಗ್ರಾಮ ಪಂಚಾಯತ್ ಮಂಡೆಕೋಲು ಇದರ ವತಿಯಿಂದ ಪಂಚಸಪ್ತತಿ 4ನೇ ಕಾರ್ಯಕ್ರಮ ಉದ್ಯೋಗ ಖಾತರಿ ಯೋಜನೆಯಡಿ ತೋಡಿನ ಹೂಳು ಎತ್ತುವ ಕಾಯಕ ತಂಡದ ಮಹಿಳೆಯರಿಗೆ ಮಹಿಳೆಯರ ಆರೋಗ್ಯ,ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಗಾರ ಪಾತಿಕಲ್ಲು ಹರಿಶ್ಚಂದ್ರ ಗೌಡರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಡಾ. ನಂದಕುಮಾರ್ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಮುಟ್ಟಿನ ಸಮಸ್ಯೆ, ಗರ್ಭಧಾರಣೆ , ಋತುಸ್ರಾವದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಶುಚಿತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪವನ್ ಪಲ್ಲತಡ್ಕ ರವರು ಪಂಚಸಪ್ತತಿ ಯ ಉದ್ದೇಶಗಳ ಬಗ್ಗೆ ಮಾತನಾಡಿ ಕಾಯಕ ತಂಡದ ಮಹಿಳೆಯರನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಮನೆಯ ಹಿರಿಯರಾದ ಕರುಣಾಕರ ಗೌಡ ಪಾತಿಕಲ್ಲು, ನರೇಗಾ ಯೋಜನೆಯ ಸಿಬ್ಬಂದಿ ಕಿರಣ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರಾದ ವಸಂತಿ ಉಗ್ರಾಣಿಮನೆ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿ ಕೋಶಾಧಿಕಾರಿ ಲೋಹಿತ್, ಉಪಾಧ್ಯಕ್ಷರುಗಳಾದ ದಯಾನಂದ ಪಾತಿಕಲ್ಲು, ವಿನುತ ಪಾತಿಕಲ್ಲು, ನಿರ್ದೇಶಕ ವಿಜೇಶ್ ಹಿರಿಯಡ್ಕ , ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಲಕ್ಷ್ಮಣ ಉಗ್ರಾಣಿಮನೆ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕೆಮ್ಮನಬಳ್ಳಿ, ಪಾತಿಕಲ್ಲು ಕುಟುಂಬಸ್ಥರು, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು ಹಾಗೂ ನರೇಗಾ ಯೋಜನೆಯ ಸಿಬ್ಬಂದಿ ನೀಮಾ ಹಾಗೂ ನರೇಗಾ ಕಾಯಕ ಮಿತ್ರರು ಉಪಸ್ಥಿತರಿದ್ದರು.
ವಿನುತ ಪಾತಿಕಲ್ಲು ಸ್ವಾಗತಿಸಿ, ಸರೋಜಿನಿ ಮಾವಂಜಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading