Ad Widget

ಮರ್ಕಂಜ : ಪ್ರೌಢಶಾಲಾ ವಠಾರದಲ್ಲಿ ಸ್ವಚ್ಛತಾ ಅಭಿಯಾನ

ಯುವಜನ ಸಂಯುಕ್ತ ಮಂಡಳಿ(ರಿ‌.) ಸುಳ್ಯ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಪಂಚಸಪ್ತತಿ 2025” ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶ್ರೀ ಗಜಾನನ ಯುವತಿ ಮಂಡಲ(ರಿ.) ಬೊಮ್ಮಾರು ಇದರ ಸದಸ್ಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮರ್ಕಂಜದ ವಠಾರದಲ್ಲಿ ಅಕ್ಟೋಬರ್ 24ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಗಜಾನನ ಯುವತಿ ಮಂಡಲರವರಿಂದ ರೂಪುಗೊಂಡಿರುವ ಮಹಿಳಾ ಸಿಂಗಾರಿ ಮೇಳದ ರಂಗಪ್ರವೇಶ ಕಾರ್ಯಕ್ರಮಕ್ಕೆ ಶಾಲಾವತಿಯಿಂದ ನೀಡಿದ ವಿಶೇಷ ಸಹಕಾರಕ್ಕಾಗಿ ಶಾಲೆಗೆ ಗೌರವ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು, ಮುಖ್ಯ ಶಿಕ್ಷಕರು/ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಮತ್ತು ಶ್ರೀ ಗಜಾನನ ಯುವತಿ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading