Ad Widget

ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ  ಧನ ಸಹಾಯ ಹಸ್ತಾಂತರ

ಕಳೆದ ಮೂರು ವರುಷಗಳಿಂದ “ಕಮರಿದ ಕನಸು-ಮಿಡಿಯುವ ಮನಸ್ಸು” ಎಂಬ ಧ್ಯೇಯದೊಂದಿಗೆ ನವರಾತ್ರಿಯ ಒಂದು ದಿನ ವೇಷ ಧರಿಸಿ ಸಂಗ್ರಹಿಸಿದ ಧನವನ್ನು ಬಡ ಅಶಕ್ತ ಕುಟುಂಬಗಳಿಗೆ ನೀಡುತ್ತಾ ಬಂದಿರುವ  ಫ್ರೆಂಡ್ಸ್ ಬೆಳ್ಳಾರೆ ತಂಡವು ಈ ವರುಷ ಕಣ್ಣಿನ ಚಿಕಿತ್ಸೆಗಾಗಿ ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಡ ಅಶಕ್ತ ಕುಟುಂಬವೊಂದಕ್ಕೆ ನೀಡಿರುತ್ತದೆ.
ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ ವಾಸವಿರುವ ಈ ಮನೆಯಲ್ಲಿ ಕು.ಶೈಲಿ ಇವಳಿಗೆ ಬಾಲ್ಯದಿಂದಲೇ ಆವರಿಸಿದ ದೃಷ್ಟಿ ಸಂಬಂಧಿತ ತೊಂದರೆಯಿಂದ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡು ಒಂದು ಕಣ್ಣಿನಲ್ಲಿ ಸೀಮಿತ ಶೇಕಡಾ ದೃಷ್ಟಿ ಹೊಂದಿ ತನ್ನ ಅಕ್ಕನ ಸಹಾಯದಿಂದ ಬೆಳ್ಳಾರೆ ಕೆ.ಪಿ.ಎಸ್ ನ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ,ಇದುವರೆಗೆ ಹಲವು ಬಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗಾಗಿ ಹಲವು ಹಣವನ್ನು ವ್ಯಯಿಸಿದ್ದು ಪ್ರಸ್ತುತ ಕಷ್ಟದಲ್ಲಿರುವ ಈ ಕುಟುಂಬಕ್ಕೆ ಚಿಕಿತ್ಸಾ ಸಹಾಯವಾಗಿ ಫ್ರೆಂಡ್ಸ್ ಬೆಳ್ಳಾರೆ ತಂಡವು 50,000 ಆರ್ಥಿಕ ಸಹಕಾರ ನೀಡಿದೆ. ಹೆಚ್ಚಿನ ಚಿಕಿತ್ಸಾ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಸಹೃದಯ ಸಂಘ, ಸಂಸ್ಥೆಗಳಿಂದ,ವ್ಯಕ್ತಿಗಳಿಂದ ನೆರವನ್ನು ಕೋರಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading