Ad Widget

ಮಡಪ್ಪಾಡಿ : “ಪಂಚಸಪ್ತತಿ ಅಭಿಯಾನ”ದ ಅಂಗವಾಗಿ ರಾತ್ರಿ ನಿಲುಗಡೆ ಬಸ್ ಸ್ವಚ್ಚತೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ “ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ನಾಲ್ಕನೇ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಇವತ್ತು ದಿನಾಂಕ 24/10/25ರ ಶುಕ್ರವಾರದಂದು ರಾತ್ರಿ ಗಂಟೆ 7.30ರಿಂದ ಮಡಪ್ಪಾಡಿಯ “ರಾತ್ರಿ ನಿಲುಗಡೆ ಬಸ್” ನ್ನು ಸ್ವಚ್ಛಗೊಳಿಸಲಾಯಿತು.
ಬಸ್ಸನ್ನು ತೊಳೆದು, ಶುಚಿಗೊಳಿಸಿ, ಅಲಂಕರಿಸಿ ವಿಭಿನ್ನ ರೀತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ತಾಲೂಕಿನ ಹಲವಾರು ಯುವಕ ಯುವತಿ ಮಂಡಲಗಳು ಬೇರೆ ಬೇರೆ ರೀತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿ ಗುರುತಿಸಿಕೊಂಡಿವೆ. ಹಾಗೂ ಮಡಪ್ಪಾಡಿ ಯುವಕ ಮಂಡಲದ ಸಹಯೋಗದಲ್ಲಿಯೂ ಕೂಡ ಇಂತಹ ಕಾರ್ಯಕ್ರಮಗಳನ್ನು ನಡೆಸಿ ತಾಲೂಕಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಡಪ್ಪಾಡಿಯ ಎಲ್ಲಾ ಸದಸ್ಯರು ಹಾಗೂ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading