Ad Widget

ಅಜ್ಜಾವರ : ಗೋಪೂಜಾನಾ ಕಾರ್ಯಕ್ರಮ ಹಾಗೂ ಪಂಚಸಪ್ತತಿ 2025 ಸ್ವಚ್ಛತಾ ಅಭಿಯಾನ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ

ಚೈತ್ರ ಯುವತಿ ಮಂಡಲ ಅಜ್ಜಾವರ,ಪ್ರತಾಪ ಯುವಕ ಮಂಡಲ ಅಜ್ಜಾವರ,ಏಕದಂತ ಗಣೇಶೋತ್ಸವ ಸಮಿತಿ ಇವುಗಳ ಸಹಯೋಗದೊಂದಿಗೆ 5 ನೇ ವರ್ಷದ ಗೋಪೂಜನಾ ಕಾರ್ಯಕ್ರಮ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನ ಮಾವಿನಪಳ್ಳದಲ್ಲಿ ಅ. 23 ರಂದು ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಗುರುರಾಜ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ರಾಜೇಶ್ ಶೆಟ್ಟಿ ಮೇನಾಲ ರವರು ಗೋಪೂಜೆಯ ಮಹತ್ವವನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪಂಚಸಪ್ತತಿ -2025 ಸ್ವಚ್ಛತಾ ಅಭಿಯಾನ ಅಂಗವಾಗಿ ಪ್ರತಿಜ್ಞಾ ವಿಧಿ ಯನ್ನು ಭೋದಿಸಲಾಯಿತು.ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಚನಿಯ ಕಲ್ತಡ್ಕ,ಶ್ರೀ ಮಹಮ್ಮಾಯಿ ದೇವಸ್ಥಾನ ಮುಖ್ತ್ತೆಸರ ಕುಸಲ, ಅಧ್ಯಕ್ಷರಾದ ಮುದ್ದ ಬಯಂಬು,ಏಕದಂತ ಸಮಿತಿ ಅಧ್ಯಕ್ಷ ವಿಜಯ,ಕೋಶಾಧಿಕಾರಿ ಸುಂದರ,ಯುವತಿ ಮಂಡಲ ಗೌರವಾಸಲಹೆಗಾರ ರಾದ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ರಾಮಕ್ಕ ಕೂಕುಲುಮಜಲು ವೇದಿಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿನೋದ್ ಮಾವಿನಪಳ್ಳ ಸ್ವಾಗತಿಸಿ,ಗುರುರಾಜ್ ವಂದಿಸಿದರು.ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading