Ad Widget

ಕಂದ್ರಪ್ಪಾಡಿ : ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ದೇವಚಳ್ಳ ಯುವಕ ಮಂಡಲ(ರಿ.), ಕಂದ್ರಪ್ಪಾಡಿ ಶೃತಿ ಯುವತಿ ಮಂಡಲ(ರಿ.), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ ಹಾಗೂ ಅಂಗನವಾಡಿ ಕೇಂದ್ರ ಕಂದ್ರಪ್ಪಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.20 ರಂದು ಕಂದ್ರಪ್ಪಾಡಿ ಶಾಲಾ ಮೈದಾನದಲ್ಲಿ “ಗ್ರಾಮೀಣ ಕ್ರೀಡಾಕೂಟ” ನಡೆಯಿತು.
ದೈವ ನರ್ತಕರಾದ ವಾಸು ಪರವ ಕಂದ್ರಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದೇವಚಳ್ಳ ಯುವಕ ಮಂಡಲದ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರಾದ ನಿವೃತ್ತ ಮುಖ್ಯ ಶಿಕ್ಷಕರಾದ ವೀರಪ್ಪ ಮಾಸ್ತರ್ ಮೊಟ್ಟೆಮನೆ ಹಾಗೂ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಕಂದ್ರಪ್ಪಾಡಿ ಶ್ರೀ ರಾಜದೈವ ಹಾಗೂ ಪುರುಷದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಾಳಿಕಾಪ್ರಸಾದ್ ಮುಂಡೋಡಿ ಹಾಗೂ ಕಂದ್ರಪ್ಪಾಡಿ ದ.ಕ.ಜಿ.ಪ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೀಣಾ ಕುಂಬಾರಕೇರಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವಚಳ್ಳ ಯುವಕ ಮಂಡಲದ ಅಧ್ಯಕ್ಷರಾದ ಉದಯಕುಮಾರ್ ಮುಂಡೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೋಟ್ಯಾಡಿ, ಕಂದ್ರಪ್ಪಾಡಿ ದ.ಕ.ಜಿ.ಪ.ಹಿ.ಪ್ರಾ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹಾಗೂ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪದ್ಮನಾಭ ಮೀನಾಜೆ, ಗುರು ಪ್ರಾನ್ವಿ ಲಿಮಿಟೆಡ್ ಬೆಂಗಳೂರು ಇದರ ಸೇಲ್ಸ್ ಪ್ರಾಜೆಕ್ಟ್ ಹೆಡ್ ಪುನೀತ್ ಕಲ್ಲಾಜೆ, ಕಂದ್ರಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವಾಣಿ.ಕೆ.ಎಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಭಟ್ ದೇವಶ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆತ್ಮಯೋಜನೆಯಡಿ 2023-24ರ “ಸಮಗ್ರ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಮೋನಪ್ಪ ಗೌಡ ಹುಲಿಮನೆ, 2022-23ನೇ ಸಾಲಿನ ಆತ್ಮಯೋಜನೆಯಡಿ “ಶ್ರೇಷ್ಠ ಜೇನು ಕೃಷಿಕ ಪ್ರಶಸ್ತಿ” ಪುರಸ್ಕೃತರಾದ ಚೆನ್ನಕೇಶವ ಗೌಡ ಪೊಯ್ಯೆಮಜಲು ಹಾಗೂ ಜಿಲ್ಲಾಮಟ್ಟದ ಕಬಡ್ಡಿ ಆಟಗಾರರಾದ ಶೋಧನ್ ರುದ್ರಚಾಮುಂಡಿ, ಪ್ರೀತಮ್ ಕಂದ್ರಪ್ಪಾಡಿ, ರಜತ್ ಗೋಳಿಯಡ್ಕ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಉದ್ಯಮಿಗಳಾದ ಉಮೇಶ್ ಮುಂಡೋಡಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.

. . . . . . . . .

ಹೃತಿಕ್ ಹಿರಿಯಡ್ಕ ಸ್ವಾಗತಿಸಿ, ಓಂ ಪ್ರಕಾಶ್ ಮುಂಡೋಡಿ ವಂದಿಸಿದರು.‌ ವಿನಯಕುಮಾರ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು. ವೇಣುಕುಮಾರ್ ಚಿತ್ತಡ್ಕ ಪ್ರಾರ್ಥಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading