Ad Widget

ಗರಡಿ ಕ್ರಿಕೆಟರ್ಸ್ ನಾಗತೀರ್ಥ ಇದರ ಆಶ್ರಯದಲ್ಲಿ 4 ತಂಡಗಳ ಲೀಗ್ ಮಾದರಿಯ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾಟ ದೀಪಾವಳಿ ಕಪ್

ಗರಡಿ ಕ್ರಿಕೆಟರ್ಸ್ ನಾಗತೀರ್ಥ ಇದರ‌ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 4 ತಂಡಗಳ ಲೀಗ್ ಮಾದರಿಯ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾಟ ದೀಪಾವಳಿ ಕಪ್ – 2025 ಅ.20 ರಂದು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರವಿ.ಬಿ ನಾಗತೀರ್ಥ, ಕುಮಾರ್ ಕಕ್ಯಾನ, ಅನುರಾಜ್ ಕಕ್ಯಾನ ನೆರವೇರಿಸಿದರು.
ನಾಲ್ಕು ತಂಡಗಳ ಮಾಲೀಕರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಥಮ ಬಹುಮಾನವನ್ನು ಅಟಲ್ ಜಿ ಕ್ರಿಕೆಟರ್ಸ್, ದ್ವಿತೀಯ ಬಹುಮಾನವನ್ನು ಕನಸು ಕ್ರಿಕೆಟರ್ಸ್ ಗೆದ್ದುಕೊಂಡಿತು.
ಸರಣಿ ಶ್ರೇಷ್ಠ ಪುನಿತ್ ಮಂಚಿಕಟ್ಟೆ, ಫೈನಲ್ ಪಂದ್ಯದ ಪಂದ್ಯಪುರುಷ ಯತೀಶ್ ನಾಗತೀರ್ಥ, ಉತ್ತಮ ಎಸೆತಗಾರ ಶಶಿ ಮೊಗ್ರ, ಉತ್ತಮ ದಾಂಡಿಗ ದುರ್ಗಾಪ್ರಸಾದ್ ಅಂಬೆಕಲ್ಲು ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ರಾಜೇಶ್ ಕುದ್ವ, ರವಿ.ಬಿ ನಾಗತೀರ್ಥ, ರೋಹಿತ್ ಪಂಬೆತ್ತಾಡಿ, ಅನುರಾಜ್ ಕಕ್ಯಾನ, ಚರಣ್ ಕಕ್ಯಾನ, ಬಹುಮಾನಗಳ ಪ್ರಯೋಜಕರಾದ ಪ್ರಸಾದ್ ನಾಗತೀರ್ಥ, ಭರತ್ ಬಳ್ಪ, ರಾಜೇಶ್ ಕುದ್ವ ಹಾಗೂ ಅಟಲ್ ಜಿ ಕ್ರಿಕೆಟರ್ಸ್ ತಂಡದ ಮಾಲೀಕರಾದ ಆಶಿತ್ ಕಲ್ಲಾಜೆ, ಕನಸು ಕ್ರಿಕೆಟರ್ಸ್ ತಂಡದ ಕುಸುಮಾಧರ ಮಿತ್ರಾಣೆ, ಆರ್.ಸಿ ಪಂಜ ತಂಡದ ರೋಹಿತ್ ಚೀಮುಳ್ಳು, ಕಲರ್ ಈಗಲ್ಸ್ ತಂಡದ ಭರತ್ ಕೊಟ್ರಂಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚೇತನ್ ಜಲಕದಹೊಳೆ ಸ್ವಾಗತಿಸಿದರು.
ಪುರಂದರ ಶೆಟ್ಟಿ ನಾಗತೀರ್ಥ ವಂದನಾರ್ಪಣೆಗೈದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading