Ad Widget

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಬಸ್ಸು ತಗುದಾಣಗಳ ನವೀಕರಣ

ಸುಬ್ರಹ್ಮಣ್ಯ ಅಕ್ಟೋಬರ್ 18 : ಲಯನ್ಸ್  ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಒಳಪಟ್ಟ 12 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಅಂದಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುವುದಾಗಿದೆ. ಅದರಂತೆ ಈಗಾಗಲೇ 4 ಬಸ್ಸು ತಗುದಾಣ ಗಳಾದ ಅರಂಪಾಡಿ, ಹೊಸಳಿಕೆ, ಪರ್ವತಮುಖಿ,ಹಾಗೂ ಕುಲ್ಕುಂದ ಬಸ್ಸು ತಂಗುದಾಣಗಳನ್ನು ಪೈಂಟಿಂಗ್ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಗಿದೆ.
ಈ 4 ತಂಗುದಾಣಗಳ ಪ್ರಾಯೋಜಕರುಗಳಾಗಿ ಲಯನ್ಸ್ ಜಿಲ್ಲೆ 318 ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಡಾl ಶಿವಕುಮಾರ್ ಹೊಸಳಿಕೆ, ಪ್ರಕಾಶ್ ಶೆಟ್ಟಿ ಕುಂದಾಪುರ, ದಿನೇಶ್ಎಂ.ಪಿ, ಪವನ್.ಎಂ.ಡಿ, ಸತೀಶ್ ಕೂಜುಗೋಡು, ಜಗದೀಶ್ ಪಡ್ಪು ಸಹಕರಿಸಿರುತ್ತಾರೆ.
ಬಸ್ಸು ತಗುದಾಣಗಳ ಲೋಕಾರ್ಪಣೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಪೂರ್ವಾಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಖಜಾಂಜಿ ಭಾರತಿ ದಿನೇಶ್, ಸದಸ್ಯ ಮೋಹನ್ ದಾಸ್ ರೈ, ಸುಬ್ರಹ್ಮಣ್ಯ ಇನ್ನರ್ ವೀಲ್ಸ್ ಕ್ಲಬ್ ಸದಸ್ಯರುಗಳಾದ ಶೋಭಾ ಗಿರಿಧರ್ ಹಾಗೂ ಜಾನಕಿ ವೆಂಕಟೇಶ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading