Ad Widget

ಪಂಜ ದೇವಸ್ಥಾನದಲ್ಲಿ ಭಕ್ತಾಧಿಗಳ ಸಭೆ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಒಳಾಂಗಣ ಕ್ಕೆ ಹಂಚಿನ ಶಾಶ್ವತ ಮಾಡು ಮಾಡುವ ಬಗ್ಗೆ ಊರ ಭಕ್ತಾದಿಗಳ ಸಭೆ ಅ.19 ರಂದು ದೇಗುಲದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ರವರ ಅಧ್ಯಕ್ಷತೆ ಯಲ್ಲಿ ಜರುಗಿತು.ವೇಧಿಕೆಯಲ್ಲಿ ದೇಗುಲದ ಗೌರವ ಸಲಹೆ ಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಕಾಚು ಕುಜುoಬ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪರಮೇಶ್ವರ ಗೌಡ ಬಿಳಿ ಮಲೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಧರ್ಮಪಾಲಗೌಡ ಮರಕಡ, ಶ್ರೀ ಸಂತೋಷ್ ಕುಮಾರ್ ರೈ ಬಲ್ಪ, ಧರ್ಮಣ್ಣ ನಾಯ್ಕ ಗರಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಪಂಜ ಪರಿಸರದ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷರಾದ ಸವಿತಾರ ಮುಡೂರು,ಪೈಂದೋಡಿ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಗೌಡ ಕುದ್ವ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ಜಾಕೆ ಹಾಗೂ ಗಂಗಾಧರ ಗೌಡ ಗುಂಡಡ್ಕ, ಆರಾಧನಾ ಸಮಿತಿಯ ಮಾಜಿ ಅಧ್ಯಕ್ಷರಾದ ಚಿನ್ನಪ್ಪ ಗೌಡ ಸಂಕಡ್ಕ, ಶ್ರೀ ಕಾಚುಕು ಜಂಬ ದೈವಸ್ಥಾನದ ಚೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಆನಂದ ಗೌಡ ಜಳಕದ ಹೊಳೆ,ಹಾಗೂ ಪರಮೇಶ್ವರ ಗೌಡ ಗೋಲ್ಯಾಡಿ ಪಂಬೆತ್ತಾಡಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಎಲ್ಲರನ್ನು ಸ್ವಾಗತಿಸಿ ವಂದಿಸಿದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading