Ad Widget

ಐವರ್ನಾಡು : ಬೇಂಗಮಲೆಯಲ್ಲಿ ಕಸ ಎಸೆದು ದಂಡ ಪಾವತಿಸಲು ನಿರಾಕರಣೆ – ಅಯೋಧ್ಯಾ ಮೆನ್ಸ್ ಡ್ರೆಸ್ ಶಾಪ್ ವಿರುದ್ಧ ಗ್ರಾ.ಪಂ.ನಿಂದ ಪೋಲೀಸ್ ದೂರು – ಇದು ಉದ್ದೇಶಪೂರ್ವಕ ಷಡ್ಯಂತ್ರ ಎಂದ ಮಾಲಕರು

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಶಾಪ್ ವಿರುದ್ದ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

. . . . . . . . .

ಅ.15 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆಯಲ್ಲಿ 3 ಕಡೆಗಳಲ್ಲಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು ಈ ಮೂರು ತ್ಯಾಜ್ಯ ತುಂಬಿದ ಬ್ಯಾಗಗಳನ್ನು ಪರಿಶೀಲಿಸಲಾಗಿ 3 ತ್ಯಾಜ್ಯ ತುಂಬಿದ ಬ್ಯಾಗ್ ಗಳು ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಗಾಂಧಿನಗರ ಸುಳ್ಯ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡು ಬಂದಿದ್ದವು. ಈ ಬಗ್ಗೆ ಅಂಗಡಿ ಮಾಲಿಕರಿಗೆ ಪಿಡಿಓ ಕರೆ ಮಾಡಿ ದಂಡ ಪಾವತಿಸುವಂತೆ ಸೂಚಿಸಿದ್ದರು. ಆದರೇ ಅಂಗಡಿ ಮಾಲಿಕರು ದಂಡ ಪಾವತಿಸಲು ನಿರಾಕರಿಸಿದ್ದರು. ಈ ಬಗ್ಗೆ ಅ. 17ರಂದು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತ್ಯಾಜ್ಯ ಎಸೆದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಶಾಪ್ ವಿರುದ್ಧ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

. . . . . . .

ಈ ಘಟನೆಗೆ ಬಗ್ಗೆ ಮಾಲಕರನ್ನು ಸಂಪರ್ಕಿಸಿದಾಗ ಆಯೋಧ್ಯಾ ಮಳಿಗೆಯ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದು ಒಂದು ಉದ್ದೇಶಪೂರ್ವಕ ಷಡ್ಯಂತ್ರ ಎಂಬ ಅನುಮಾನ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಳಿಗೆಯ ಬಿಲ್ ಇತ್ಯಾದಿ ದಾಖಲೆಗಳು ದೊರೆತಿವೆ ಎಂಬ ಸುಳ್ಳು ಸುದ್ದಿ ಹರಡಲಾಗಿದ್ದು, ವಾಸ್ತವದಲ್ಲಿ ಆ ದಾಖಲೆಗಳು 6 ತಿಂಗಳ ಹಿಂದಿನ ಗ್ರಾಹಕರ ಬಿಲ್‌ಗಳು ಹಾಗೂ ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆ ಆಗಿವೆ. ಅವುಗಳನ್ನು ಆಧಾರವಿಲ್ಲದ ರೀತಿಯಲ್ಲಿ ಬಳಸಿ ಸುಳ್ಳು ಪ್ರಚಾರ ಮಾಡಲಾಗಿದೆ. ಕಳೆದ ಆರು ವರ್ಷಗಳಲ್ಲಿ ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದಾರೆ ಎಂಬ ಆರೋಪ ಆಯೋಧ್ಯಾ ಮಳಿಗೆಯ ಮೇಲೆ ಎಂದಿಗೂ ಕೇಳಿಬಂದಿಲ್ಲ. ಸುಳ್ಯದಲ್ಲಿ ಈಗಾಗಲೇ ಕಾರ್ಪೊರೇಷನ್ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಐವರ್ನಾಡು ವ್ಯಾಪ್ತಿಗೆ ಹೋಗಿ ಕಸ ಹಾಕಿ ಬರುವ ಪ್ರಶ್ನೆಯೇ ಇಲ್ಲ. ಆಯೋಧ್ಯಾ ಮಳಿಗೆಯ ಮೇಲೆ ನಡೆದಿರುವ ಈ ಅಸತ್ಯ ಮತ್ತು ಉದ್ದೇಶಪೂರ್ವಕ ದೂರು, ನಮ್ಮ ಸಾಮಾಜಿಕ ಗೌರವ ಮತ್ತು ವೃತ್ತಿ ನಿಷ್ಠೆಯನ್ನು ಕಳಂಕಿತಗೊಳಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading