Ad Widget

ಸುಬ್ರಹ್ಮಣ್ಯ – ಏನೆಕಲ್ಲು ರಾಜರಸ್ತೆಯ ಹೊಂಡ-ಗುಂಡಿಗಳಿಗೆ ಮುಕ್ತಿ ಎಂದು…!? ; ವಾಹನ ಸವಾರರ ಸಂಕಷ್ಟಗಳಿಗೆ ಕೊನೆ ಎಂದು…!?

ಸುಬ್ರಹ್ಮಣ್ಯ ಅಕ್ಟೋಬರ್ 18 : ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗುವ ಸುಬ್ರಹ್ಮಣ್ಯ – ಮಂಜೇಶ್ವರ ರಾಜರಸ್ತೆಯು ಕುಮಾರಧಾರ ಜಂಕ್ಷನ್ ನಿಂದ ಏನೇಕಲ್ಲುವರೆಗೆ ಸಂಪೂರ್ಣ ಹಾಳಾಗಿರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಲ್ಲಿ ಹೊಂಡ-ಗುಂಡಿಗಳು ಬಿದ್ದಿವೆ. ಇಲ್ಲಿ ದ್ವಿಚಕ್ರ ವಾಹನ ಸವರಾರು ಸರ್ಕಸ್ ಮಾಡಿಕೊಂಡೇ ಸಂಚರಿಸಬೇಕಾಗಿದ್ದು, ನಾಲ್ಕು ಚಕ್ರಗಳ ವಾಹನಗಳು ಕೂಡ 10-15 ಕಿಲೋಮೀಟರ್ ವೇಗದ ಮಿತಿಯಲ್ಲಿ ಚಲಿಸುವಂತಹ ಪರಿಸ್ಥಿತಿ ಉಂಟಾಗಿದೆ. ಈ ಮಾರ್ಗದಲ್ಲಿ ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದ ಪ್ರಮೇಯವು ನಡೆದಿದ್ದು, ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಗಳು ಇತ್ತ ಗಮನಹರಿಸಿ ಈ ರಸ್ತೆಯನ್ನು ಡಾಮರೀಕರಣ ಮಾಡಿ ವಾಹನ ಸವಾರರ ಸುರಕ್ಷತೆಗೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading