Ad Widget

ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಗೋಪೂಜೆ ಆಚರಣೆ

ಅಕ್ಟೋಬರ್ 18ರಂದು  ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೀಪಾವಳಿಯ ಮಹತ್ವ ಸಾರುವ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳ ಮಹತ್ವವನ್ನು ತಿಳಿಸುವ ಪ್ರಯತ್ನದೊಂದಿಗೆ ಶಾಲೆಯಲ್ಲಿ ಗೋವನ್ನು ಜಳಕ ಮಾಡಿಸಿ, ಹೂಹಾರ ಹಾಕಿ, ಅರಸಿನ-ಕುಂಕುಮ ಹಚ್ಚಿ ದೀಪಾರತಿ ಬೆಳಗಿಸಿ ಹಣ್ಣು -ಹಂಪಲುಗಳನ್ನು ನೀಡಲಾಯಿತು.
ಗೋಮಾತೆಗೆ ಪ್ರದಕ್ಷಿಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುತ್ತದೆ ಎಂಬಂತೆ ಆಚರಿಸಲಾಯಿತು. ಶಾಲೆಯಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆದುಕೊಂಡರು.
ಶಾಲಾ ಮಕ್ಕಳಿಂದ ಕುಣಿತ ಭಜನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಅಚ್ಯುತ ಅಟ್ಲೂರು ರವರು ವಿದ್ಯಾರ್ಥಿಗಳಿಗೆ ದೀಪಾವಳಿ ಹಾಗೂ ಗೋ ಪೂಜಾ ಮಹತ್ವವನ್ನು ಕಥೆಯ ಮೂಲಕ ತಿಳಿಸಿದರು. ಹಾಗೂ ವಿದ್ಯಾರ್ಥಿಗಳು ದೀಪಾವಳಿಯ ದಿನ ಮನೆಯಲ್ಲಿ ಹೇಗೆ ದೀಪಾವಳಿಯನ್ನು ಆಚರಿಸಬೇಕೆಂದು ತಿಳಿ ಹೇಳಲಾಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು,ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading