Ad Widget

ಇಂಪಾರ್ಟೆಂಟ್ ಎಫ್‌.ಸಿ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಇಂಪಾರ್ಟೆಂಟ್ ಎಫ್‌.ಸಿ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮುಳಿಯ ಸಾತ್ವಿಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವಕ ಮಂಡಲ ಗುತ್ತಿಗಾರು ಇದರ ಗೌರವಾಧ್ಯಕ್ಷ ಲೋಹಿತ್ ಚೈಪೆ, ಗುತ್ತಿಗಾರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಬಾಕಿಲ ಹಾಗೂ ಗುತ್ತಿಗಾರು ರಬ್ಬರ್ ಸೊಸೈಟಿಯ ನಿರ್ದೇಶಕ ಲೋಕೇಶ್ವರ ಡಿ.ಆರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್, ಕೌಶಿಕ್ ಮುಳಿಯ, ಸುಮುಖ ರಾಮ್, ಶ್ರೀಶರಣ್ ಮೊಗ್ರ ಮತ್ತು ಮೋನಿಷ್ ಬಾಕಿಲ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಅಶ್ಲೇಶ್ ಕೆ.ಡಿ. ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಕಿರಣ್ ವಳಲಂಬೆ ಅವರನ್ನು ಖಜಾಂಚಿಯಾಗಿ ಹಾಗೂ ವರ್ಷಿತ್ ಕಡ್ತಲ್ ಕಜೆ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಅಮಿತ್ ನಾಯಕ್, ಚರಣ್ ಕೊಂಬೊಟ್ಟು, ಪ್ರೀತಮ್ ನಾರ್ಣಕಜೆ, ಬಾಲಕೃಷ್ಣ ಉಜಿರಡ್ಕ, ರಾಕೇಶ್ ಮೆಟ್ಟಿನಡ್ಕ ಮತ್ತು ಎಲೈ ಅರಸ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಸಭೆಯ ಕೊನೆಯಲ್ಲಿ ಸಂಘದ ಭವಿಷ್ಯದ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading