Ad Widget

ಬೆಳ್ಳಾರೆ : ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಾಗದ ಸರ್ವೆ

ಬೆಳ್ಳಾರೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಳೆಯ ಅಂಬೇಡ್ಕರ್ ಭವನದ ಜಾಗದಲ್ಲಿ ತಾಲೂಕು ಸರ್ವೆಯರ್ ಜಗದೀಶ್ ಮತ್ತು ಸಹಾಯಕರಿಂದ ಸರ್ವೆ ಕಾರ್ಯ ನಡೆಯಿತು.90-1b1 ಸರ್ವೆ ಸಂಖ್ಯೆಯ ಈ ಜಾಗವು ಸುಮಾರು 7 ಸೆನ್ಸ್ ರಷ್ಟಿದೆ ಎಂದು ಸರ್ವೆಯಲ್ಲಿ ತಿಳಿದುಬಂದಿದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರಾದ(ಮೈಸೂರು ವಿಭಾಗ)ಆನಂದ ಬೆಳ್ಳಾರೆಯವರ ಸತತ ಹತ್ತು ವರುಷಗಳ ಹೋರಾಟದ ಫಲದಿಂದಾಗಿ ಇದೀಗ ಬೆಳ್ಳಾರೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಮಯ ಕೂಡಿ ಬಂದಿದೆ.ಸರ್ವೆಯ ಸಂದರ್ಭ ಸ್ಥಳದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೃಷ್ಣ,ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರವೀಣ್,ಬೆಳ್ಳಾರೆ ಪಿ.ಡಿ.ಒ ಪ್ರವೀಣ್,ಗ್ರಾಮ ಆಡಳಿತಾಧಿಕಾರಿ ಅಜಯ್,ಸಹಾಯಕರಾದ ಯತೀಶ್, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಚಂದ್ರಶೇಖರ್ ಪನ್ನೆ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಮಣಿಕಂಠ,ದ.ಸಂ.ಸ ಮುಖಂಡರಾದ ಅಚ್ಚುತ ಮಲ್ಕಜೆ, ವಿಶ್ವನಾಥ್ ಅಲೆಕ್ಕಾಡಿ, ಕುಮಾರ್ ಪಂಜ,ಊರ ಪ್ರಮುಖರಾದ ಜಯರಾಮ ಉಮಿಕ್ಕಳ,ಪ್ರೇಮಚಂದ್ರ,ಸುನಿಲ್ ರೈ ಪುಡ್ಕಜೆ,ರಝಾಖ್ ಪನ್ನೆ ಮತ್ತು ಊರ ಹಿತೈಷಿಗಳು ಹಾಜರಿದ್ದರು.

. . . . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading