Ad Widget

ಸ್ನೇಹ ಸಂಗಮ ರಿಕ್ಷಾ ಚಾಲಕರ ಯೂನಿಯನ್ ನ ಮೃತ ಸದಸ್ಯನ ಕುಟುಂಬಕ್ಕೆ ಸಹಾಯ ಹಸ್ತ ನೀಡಿದ ಪುತ್ತೂರು ಸ್ನೇಹ ಸಂಗಮ ಯೂನಿಯನ್

ಬಹಳ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಂತಹ ಸ್ನೇಹ ಸಂಗಮ ಯೂನಿಯನ್ ಒಂದು ಸುಳ್ಯ ತಾಲೂಕಿನಲ್ಲಿ  ಮರುಜೀವ ಪಡೆದು ನೂರರಿಂದ ಮೇಲೆ ಸದಸ್ಯತ್ವವನ್ನು ಪಡೆದು 4 ತಿಂಗಳ ಹಿಂದೆ  ಅನಿಲ್ ಜಟ್ಟಿಪಳ್ಳ ಎಂಬವರು ನೂತನವಾಗಿ ಅಧ್ಯಕ್ಷ ಸ್ಥಾನವನ್ನ ಪಡೆದಿದ್ದರು. ವಿಧಿಯ ಲೀಲೆ ಎಂಬಂತೆ ಒಂದು ವಾರದ ಹಿಂದೆ ಹೃದಯಾಘಾತದಿಂದ  ಮೃತರಾದರು. ಬಡ ಕುಟುಂಬ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರಿಗೆ ನೆರವಾದವರು ಸ್ನೇಹ ಸಂಗಮ ಸುಳ್ಯ ಘಟಕ, ಇವರಿಗೆ ನೆನಪಿಗೆ ಬಂದವರು ಗೌರವಾಧ್ಯಕ್ಷರಾದ ಶ್ರೀಯುತ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ. ಇವರಲ್ಲಿ ತಮ್ಮ ಸಹಾಯ ಹಸ್ತವನ್ನು ಕೇಳಿಕೊಂಡರು.  ಇವರ  ಮನವಿಯ ಮೇರೆಗೆ ಅಧ್ಯಕ್ಷ ಕಾರ್ಯದರ್ಶಿಗಳು ಪದಾಧಿಕಾರಿಗಳು ಒಳಗೊಂಡಂತೆ ಎಲ್ಲಾ ಸದಸ್ಯರಲ್ಲಿ ಸಹಾಯವನ್ನು ಸಂಗ್ರಹಿಸಿ ಸುಮಾರು 10,000 ರೂಗಳ  ಧನಸಹಾಯವನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ಎಂಬಲ್ಲಿ ದಿ.ಅನಿಲ್ ರವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಪುತ್ತೂರು ತಾಲೂಕಿನ ಸ್ನೇಹ ಸಂಗಮದ ಪದಾಧಿಕಾರಿಗಳು ಸೇರಿ ಹಸ್ತಾಂತರಿಸಿದರು.
ಪುತ್ತೂರು ಸ್ನೇಹಸಂಗಮದ ಅಧ್ಯಕ್ಷರಾದ ತಾರಾನಾಥ ಗೌಡ ಬನ್ನೂರು, ಕಾರ್ಯದರ್ಶಿಗಳು ಹರೀಶ್ ಕುಮಾರ್ ತೆಂಕಿಲ, ಸಂಚಾಲಕರಾದ ಅರವಿಂದ್ ಪೆರಿಗೇರಿ, ಜೊತೆ ಕಾರ್ಯದರ್ಶಿಗಳು ಲಕ್ಷ್ಮಣ್ ಬನ್ನೂರ್ ಹಾಗೂ ಸದಸ್ಯರಾದ ಕೇಶವ ಶೇಖಮಲೆ ಹಾಗು ಸುಳ್ಯ ಘಟಕದ ಸದಸ್ಯ ರಾದ ಅಬ್ದುಲ್ ರಝಾಕ್ ಹಾಗು ಅಕ್ಷತ್ ಕ್ರಾಸ್ತ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading