Ad Widget

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯದ ಪ್ರಥಮ ತ್ರೈಮಾಸಿಕ ಸಭೆ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ಇದರ ಪ್ರಥಮ ತ್ರೈಮಾಸಿಕ ಸಭೆಯು 12.10.2025ರಂದು ಸಿ.ಎ.ಬ್ಯಾಂಕ್ ಐಸಿರಿ ಸಭಾಂಗಣ ಮರ್ಕಂಜದಲ್ಲಿ ನಡೆಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮವನ್ನು ನಿವೃತ  ಪೊಲೀಸ್ ಅಧಿಕಾರಿ ರಾಜಗೋಪಾಲ್ ಉಳುವಾರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಂಪಾಜೆ ವಲಯ ಮೇಲ್ವಿಚಾರಕರಾದ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಘಾಟಕರು ಮಾತನಾಡಿ ಭಜನಾ ಪರಿಷತ್ ನ ಕಾರ್ಯಕ್ರಮದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ವಲಯ ಮಟ್ಟದ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಸಾಧಕ ಪ್ರಶಸ್ತಿ ಸಿಕ್ಕಿದ ಮಿನುಂಗೂರು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಸದಸ್ಯರಾದ ಗೋವಿಂದ ಅಳವುಪಾರೆ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರಾದ ಸೋಮಶೇಖರ ಪೈಕರವರು ಮಾತನಾಡಿ ಮುಂದೆ ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ಭಜನೆ ಬಗ್ಗೆ ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ಕೊನೆಗೆ ಮಾತನಾಡಿದ ಸಂಪಾಜೆ ವಲಯ ಅಧ್ಯಕ್ಷರಾದ ಭಾರತಿ ಉಳುವಾರು ಮುಂದೆ ನಡೆಯಲಿರುವ ವಲಯ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಎಲ್ಲಾ ಭಜನಾ ಮಂಡಳಿಯವರ ಸಹಕಾರ ಕೋರಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಾಧವ ಗೌಡ ನಿವೃತ ಪೋಲೀಸ್ ಅಧಿಕಾರಿಗಳು, ಭಜನಾ ಮಂಡಳಿಗಳ ಅಧ್ಯಕ್ಷರುಗಳು. ವಲಯ ಪದಾಧಿಕಾರಿಗಳು. ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು. ಸೇವಾ ಪ್ರತಿನಿದಿ ರೋಹಿಣಿ ಎಲ್ಲರನ್ನು ಸ್ವಾಗತಿಸಿದರು.
ವಲಯ ಕಾರ್ಯದರ್ಶಿ ನಾರಾಯಣಅಜ್ಜಿಕಲ್ಲು
ಕಾರ್ಯಕ್ರಮ ನಿರೂಪಿಸಿದರು.
ಕೊನೆಗೆ ರೋಹಿಣಿ ಮರ್ಕಂಜ ಇವರಿಂದ ಧನ್ಯವಾದ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.
ಶ್ರೀ ಮಿನುಂಗೂರು ಭಜನಾ ಮಂಡಳಿಯವರು ಲಘು ಉಪಹಾರ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading